ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಪವರ್ ಗ್ರೀಡ್ 1543 ಬೃಹತ್ ಹುದ್ದೆಗಳ ನೇಮಕಾತಿ ಮಾಡುತ್ತಿದೆ ಇದರಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಹೀಗಾಗಿ ಒಂದು ಖುಷಿ ವಿಚಾರ ಎನ್ನಬಹುದು ಏಕೆಂದರೆ ಅರ್ಜಿ ಸಲ್ಲಿಸಿರುವ ಅಂತಹ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಹುದ್ದೆ ಸಿಗಲಿದೆ.
ಎಲ್ಲಾ ಅಭ್ಯರ್ಥಿಗಳೇ ಗಮನಿಸಿ ನೀವು ಕೂಡ ಪವರ್ ಗ್ರಿಡ್ PGCIL 1543 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾಗಬೇಕು ಹಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ.
ಭಾರತದ ವಿದ್ಯುತ್ ಪ್ರಸರಣ ವ್ಯವಸ್ಥೆಯ ಎಂದೇ ಖ್ಯಾತಿ ಪಡೆದಿರುವ Power Grid Corporation of India Limited (PGCIL), 2025 ನೇ ಸಾಲಿನ ದೊಡ್ಡ ನೇಮಕಾತಿ ಪ್ರಕಟಿಸಿದೆ.
ಇದನ್ನು ಓದಿ:KSRTC ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC,ITI ಪಾಸ್ ಆದವರು ಇಂದೇ ಅರ್ಜಿ ಸಲ್ಲಿಸಿ.!!
ಈ ಬಾರಿ ಬರೋಬ್ಬರಿ ಒಟ್ಟು 1543 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಉದ್ಯೋಗ ಹುಡುಕುತ್ತಿರುವ ಇಂಜಿನಿಯರ್ಗಳು, ಡಿಪ್ಲೋಮಾ ಹುದ್ದೆದಾರರು ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶ ಎಂದು ಹೇಳಬಹುದು.
ಇಂದಿನ ಈ ಒಂದು ಲೇಖನದಲ್ಲಿ ನಾವು ಪವರ್ ಗ್ರೀಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಪ್ರತಿ ತಿಂಗಳ ವೇತನ ಎಷ್ಟಿರುತ್ತೆ..? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು..? ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಎಲ್ಲಿ ಸಿಗುತ್ತೆ..? ಹೀಗೆ ಹತ್ತು ಹಲವಾರು ನಿಮ್ಮೆಲ್ಲ ಪ್ರಶ್ನೆಗಳಿಗೆ ನಾವು ನಿಮಗಂತಲೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಈ ಲೇಖನವನ್ನ ಕೊನೆಯವರೆಗೂ ಓದಿ ಸಾಕು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ.
PGCIL ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಳ್ಳಿ:
Table of Contents
Power Grid Corporation of India Limited (PGCIL) ಕೇಂದ್ರ ಸರ್ಕಾರದ ಮಾಲೀಕತ್ವದ “ಮಹಾರತ್ನ” ಸಾರ್ವಜನಿಕ ವಲಯದ ಕಂಪನಿಯಾಗಿದೆ ಗಮನಿಸಿ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ.
ದೇಶದ ವಿದ್ಯುತ್ ಪ್ರಸರಣ ಜಾಲವನ್ನು ನಿರ್ವಹಿಸುವ ಜವಾಬ್ದಾರಿ ಈ ಸಂಸ್ಥೆಗೆ ಇದೆ. 1989ರಲ್ಲಿ ಸ್ಥಾಪನೆಯಾದ ನಂತರ, PGCIL ಇಂದು ಭಾರತದ 90% ಕ್ಕೂ ಹೆಚ್ಚು ವಿದ್ಯುತ್ ಪ್ರಸರಣವನ್ನು ನಿರ್ವಹಿಸುತ್ತಿದೆ.
PGCIL ನಲ್ಲಿ ಕೆಲಸ ಮಾಡುವುದರಿಂದ ಆಗುವ ನಿಮಗೆ ಲಾಭಗಳು:
- ರಾಷ್ಟ್ರ ಮಟ್ಟದ ಪ್ರಾಜೆಕ್ಟ್ಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ.
- ಉನ್ನತ ಮಟ್ಟದ ತಾಂತ್ರಿಕ ಅನುಭವ ಪಡೆಯಬಹುದು.
- ಉತ್ತಮ ವೇತನ ಹಾಗೂ ಭದ್ರತೆ ಸಿಗುತ್ತದೆ.
- ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ಭರವಸೆ ಇರುತ್ತದೆ.
ಲಭ್ಯವಿರುವ ಹುದ್ದೆಗಳ ವಿವರಣೆ:
ಇದನ್ನು ಓದಿ:ಕರ್ನಾಟಕ ರೈಲ್ವೆ ನೇಮಕಾತಿ 2025.!SSLC &ITI ಪಾಸ್ ಆದವರಿಗೆ ನೇಮಕಾತಿ.!!
ಈ ಬಾರಿ PGCIL ಒಟ್ಟು 1543 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಭಾಗವಾರು ಹುದ್ದೆಗಳ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ:
- Field Engineer (Electrical): 532 ಹುದ್ದೆಗಳು
- Field Engineer (Civil): 198 ಹುದ್ದೆಗಳು
- Field Supervisor (Electrical): 535 ಹುದ್ದೆಗಳು
- Field Supervisor (Civil): 193 ಹುದ್ದೆಗಳು
- Field Supervisor (Electronics & Communication): 85 ಹುದ್ದೆಗಳು
ಅಥವಾ ಕನ್ನಡದಲ್ಲಿ ಮಾಹಿತಿ ಓದಿ ಹುದ್ದೆಗಳ ಕುರಿತು ಮಾಹಿತಿ:
ಹುದ್ದೆಯ ಹೆಸರು (ಪದವಿ) | ವಿಭಾಗ | ಹುದ್ದೆಗಳ ಸಂಖ್ಯೆ |
ಫೀಲ್ಡ್ ಇಂಜಿನಿಯರ್ | ಎಲೆಕ್ಟ್ರಿಕಲ್ | 532 |
ಫೀಲ್ಡ್ ಇಂಜಿನಿಯರ್ | ಸಿವಿಲ್ | 198 |
ಫೀಲ್ಡ್ ಸೂಪರ್ವೈಸರ್ | ಎಲೆಕ್ಟ್ರಿಕಲ್ | 535 |
ಫೀಲ್ಡ್ ಸೂಪರ್ವೈಸರ್ | ಸಿವಿಲ್ | 193 |
ಫೀಲ್ಡ್ ಸೂಪರ್ವೈಸರ್ | ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ | 85 |
👉 ಒಟ್ಟು ಹುದ್ದೆಗಳು: 1543
ದಯವಿಟ್ಟು ಗಮನಿಸಿ ಈ ಹುದ್ದೆಗಳು ತಾತ್ಕಾಲಿಕ ಅವಧಿಗೆ (Fixed Term Basis) ನೇಮಕಾತಿ ಮಾಡಲಾಗುತ್ತವೆ. ಪ್ರಾಜೆಕ್ಟ್ ಅವಶ್ಯಕತೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಅವಕಾಶ ದೊರೆಯದಂತಾಗುತ್ತದೆ.
ಅರ್ಹತೆ ಮತ್ತು ಅನುಭವ ಏನಿರಬೇಕು:

Field Engineer /ಫೀಲ್ಡ್ ಇಂಜಿನಿಯರ್
- ಕನಿಷ್ಠ ಅಭ್ಯರ್ಥಿಗಳು 55% ಅಂಕಗಳೊಂದಿಗೆ ಪೂರ್ಣಕಾಲಿಕ B.E./B.Tech./B.Sc. (Engineering) – Electrical ಅಥವಾ Civil ವಿಭಾಗದಲ್ಲಿ ಪದವಿ.
- Rural Electrification, Distribution Management System, Transmission Lines, Sub-Stations, Testing & Commissioning ಕ್ಷೇತ್ರಗಳಲ್ಲಿ ಕನಿಷ್ಠವಾದರೂ ನೀವೆಲ್ಲರೂ 1 ವರ್ಷದ ಅನುಭವ ಅಗತ್ಯ.
- PSU ಸಂಸ್ಥೆಯಲ್ಲಿ ಅನುಭವ ಹೊಂದಿದ್ದರೆ ಹೆಚ್ಚುವರಿ ಅಂಕಗಳು.
Field Supervisor/ಫೀಲ್ಡ್ ಸೂಪರ್ವೈಸರ್
- Electrical / Civil / Electronics & Communication ವಿಭಾಗದಲ್ಲಿ ಕನಿಷ್ಠ 55% ಅಂಕಗಳೊಂದಿಗೆ Diploma ಮುಗಿಸಿರುವಂತಹ ಅಭ್ಯರ್ಥಿಗಳು.
- ಕನಿಷ್ಠ 1 ವರ್ಷದ ಅನುಭವ Design, Construction, Testing, Commissioning ಅಥವಾ Operation & Maintenance ಕ್ಷೇತ್ರದಲ್ಲಿ ಇರಬೇಕು.
- ಸಾರ್ವಜನಿಕ ವಲಯದಲ್ಲಿ ಕೆಲಸದ ಅನುಭವವಿದ್ದರೆ ಹೆಚ್ಚುವರಿ ಪ್ರಯೋಜನ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ: 27 ಆಗಸ್ಟ್ 2025 (ಸಂಜೆ 5 ಗಂಟೆಯಿಂದ)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಸೆಪ್ಟೆಂಬರ್ 2025 (ರಾತ್ರಿ 11:59 ಗಂಟೆಯವರೆಗೆ)
ಗಮನಿಸಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಅರ್ಜಿ ಕೊನೆ ದಿನಾಂಕದೊಳಗೆ ನೀವೆಲ್ಲರೂ ಅರ್ಜಿ ಸಲ್ಲಿಸಿ ಒಂದು ವೇಳೆ ಒಂದೇ ಒಂದು ನಿಮಿಷ ಜಾಸ್ತಿ ಆದರೆ ಸೆಪ್ಟೆಂಬರ್ 18 ಆದರೆ ಅರ್ಪಿಸಲಿಸಲು ನೀವು ಅನರ್ಹರು ಎಂದರ್ಥ ದಯವಿಟ್ಟು ಗಮನಿಸಿ ಮುಂದಿನ ಕಾರ್ಯ ಕೈಗೊಳ್ಳಿ.
ವಯೋಮಿತಿ ಹಾಗೂ ಸಡಿಲಿಕೆ:
- ಗರಿಷ್ಠ ವಯೋಮಿತಿ: 29 ವರ್ಷ (17 ಸೆಪ್ಟೆಂಬರ್ 2025ರ ವೇಳೆಗೆ)
- SC, ST, OBC, PwBD ಮತ್ತು Ex-Servicemen ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗಿರುತ್ತೆ.
ಅರ್ಜಿ ಶುಲ್ಕ ಎಷ್ಟಿರುತ್ತೆ:
ಒಂದು ವೇಳೆ ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಅರ್ಜಿ ಶುಲ್ಕ ಎಷ್ಟಿರುತ್ತೆ ಎಂಬ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಗಮನಿಸಿ.
- Field Engineer ಹುದ್ದೆಗೆ: ₹400
- Field Supervisor ಹುದ್ದೆಗೆ: ₹300
- SC / ST / PwBD / Ex-SM ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
ವೇತನ ಮತ್ತು ಸೌಲಭ್ಯಗಳು
PGCIL ನಲ್ಲಿ ಆಯ್ಕೆಯಾಗಿದ್ದರೆ ಈ ಕೆಳಗಿನಂತೆ ನೀವು ಆಯಾ ಹುದ್ದೆಗಳಿಗೆ ಆಯ್ಕೆ ಆಗಿದ್ದೀರೋ ಅದರ ಪ್ರಕಾರ ವೇತನವನ್ನು ನೀಡಲಾಗುತ್ತೆ, ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
Field Engineer ಹುದ್ದೆಗಳಿಗೆ
- ಮೂಲ ವೇತನ: ₹30,000 (ಪ್ರಾರಂಭಿಕ)
- ಜೊತೆಗೆ Industrial DA, HRA ಮತ್ತು ಇತರ ಭತ್ಯೆಗಳು (ಮೂಲ ವೇತನದ 35% ತನಕ)
- ವಾರ್ಷಿಕ CTC: ಸುಮಾರು ₹8.9 ಲಕ್ಷ
Field Supervisor ಹುದ್ದೆಗಳಿಗೆ
- ಮೂಲ ವೇತನ: ₹23,000 (ಪ್ರಾರಂಭಿಕ)
- ಜೊತೆಗೆ Industrial DA, HRA ಮತ್ತು ಇತರ ಸೌಲಭ್ಯಗಳು
- ವಾರ್ಷಿಕ CTC: ಸುಮಾರು ₹6.8 ಲಕ್ಷ
ಹೆಚ್ಚುವರಿ ಆಗುವ ಪ್ರಯೋಜನಗಳೇನು
- ವೈದ್ಯಕೀಯ ವಿಮೆ
- ನಿವೃತ್ತಿ ಪ್ರಯೋಜನಗಳು
- ಪ್ರವಾಸ ಭತ್ಯೆ
- ವಸತಿ ಅಥವಾ HRA ಸೌಲಭ್ಯ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Test) ಮೂಲಕ ಆಯ್ಕೆ ಮಾಡಲಾಗುತ್ತದೆ. ದಯವಿಟ್ಟು ಗಮನಿಸಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಾಗುತ್ತದೆ
ಪರೀಕ್ಷೆಯ ರೂಪ ರೇಷ ತಿಳಿದುಕೊಳ್ಳಿ ಒಂದು ಬಾರಿ:
- Technical Knowledge Test – 50 ಪ್ರಶ್ನೆಗಳು (ಅಭ್ಯರ್ಥಿಯ ವಿಭಾಗಕ್ಕೆ ಸಂಬಂಧಿಸಿದ ವಿಷಯ)
- Aptitude Test – 25 ಪ್ರಶ್ನೆಗಳು (General English, Reasoning, Data Interpretation, Puzzles ಇತ್ಯಾದಿ)
ಎಲ್ಲಾ ಪ್ರಶ್ನೆಗಳು Multiple Choice Questions (MCQ) ಮಾದರಿಯಲ್ಲಿ ಇರುತ್ತೆ ದಯವಿಟ್ಟು ಗಮನಿಸಿ ಅಥವಾ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಈ ಕೆಳಗಡೆ ನಿಮಗೆ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿ ಒದಗಿಸಲಾಗಿದೆ ಈ ಆರ್ಟಿಕಲ್ ಕೊನೆಯ ಭಾಗದಲ್ಲಿ ನಿಮಗೆ ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ಗಳಾಗಿರುವಂತಹ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಲಾಗಿದೆ ಅಲ್ಲಿಂದ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
- PGCIL ಅಧಿಕೃತ ವೆಬ್ಸೈಟ್ powergrid.in ಗೆ ಭೇಟಿ ನೀಡಿ.
- “Careers” ವಿಭಾಗದಲ್ಲಿ “Job Opportunities” ಆಯ್ಕೆ ಮಾಡಿ.
- ಪ್ರಕಟಣೆ ಸಂಖ್ಯೆ CC/03/2025 ಅನ್ನು ಹುಡುಕಿ.
- “Apply Online” ಕ್ಲಿಕ್ ಮಾಡಿ.
- ಆನ್ಲೈನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಸಂಬಂಧಿತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿ ಹಾಗೂ ದೃಢೀಕರಣ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ ಎಲ್ಲಿ ಪ್ರಿಂಟೌಟ್ ಫಾರಂ ತೆಗೆದಿಟ್ಟುಕೊಳ್ಳುವುದು ಬಹಳ ದೊಡ್ಡ ಕೆಲಸ ಹೀಗಾಗಿ ಯಾವುದೇ ಕಾರಣಕ್ಕೂ ನೀವು ಇದನ್ನ ಮರೆಯದಿರಿ.
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. PGCIL 2025 ನೇಮಕಾತಿ ಅರ್ಜಿ ಪ್ರಕ್ರಿಯೆ ಯಾವ ದಿನಾಂಕದವರೆಗೆ ಇರುತ್ತದೆ?
- 17 ಸೆಪ್ಟೆಂಬರ್ 2025 ರ ರಾತ್ರಿ 11:59 ಗಂಟೆಯವರೆಗೆ.
2. ಒಟ್ಟು ಎಷ್ಟು ಹುದ್ದೆಗಳ ನೇಮಕಾತಿ ನಡೆಯುತ್ತಿದೆ?
- ಒಟ್ಟು 1543 ಹುದ್ದೆಗಳು.
3. ಅರ್ಜಿಯನ್ನು ಯಾವ ವೆಬ್ಸೈಟ್ನಲ್ಲಿ ಸಲ್ಲಿಸಬೇಕು?
- ಕೇವಲ powergrid.in ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ.
4. ಅರ್ಜಿ ಶುಲ್ಕ ಎಷ್ಟು?
- Field Engineer ಗೆ ₹400, Field Supervisor ಗೆ ₹300. SC/ST/PwBD/Ex-SM ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.
5. ವೇತನ ಎಷ್ಟು?
- Field Engineer ಗಾಗಿ ವಾರ್ಷಿಕ CTC ಸುಮಾರು ₹8.9 ಲಕ್ಷ, Field Supervisor ಗಾಗಿ ಸುಮಾರು ₹6.8 ಲಕ್ಷ.
6. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
- ಲಿಖಿತ ಪರೀಕ್ಷೆ (Technical + Aptitude Test) ಆಧಾರದ ಮೇಲೆ.
7. ಗರಿಷ್ಠ ವಯೋಮಿತಿ ಎಷ್ಟು?
- ಸಾಮಾನ್ಯ ಅಭ್ಯರ್ಥಿಗಳಿಗೆ 29 ವರ್ಷ. ರಿಯಾಯಿತಿ ಸರ್ಕಾರದ ನಿಯಮಗಳ ಪ್ರಕಾರ.
8. ಅನುಭವ ಇಲ್ಲದವರು ಅರ್ಜಿ ಹಾಕಬಹುದೇ?
- ಇಲ್ಲ. ಕನಿಷ್ಠ 1 ವರ್ಷದ ಸಂಬಂಧಿತ ಅನುಭವ ಅಗತ್ಯ.
9. ನೇಮಕಾತಿ ಶಾಶ್ವತವೇ ಅಥವಾ ತಾತ್ಕಾಲಿಕವೇ?
- ಈ ಹುದ್ದೆಗಳು Fixed Term Basis ನಲ್ಲಿ ನೀಡಲಾಗುತ್ತವೆ.
10. PGCIL ನಲ್ಲಿ ಕೆಲಸ ಮಾಡುವುದರಿಂದ ಏನು ಲಾಭ?
- ಉತ್ತಮ ವೇತನ, ಉದ್ಯೋಗ ಭದ್ರತೆ, ತಾಂತ್ರಿಕ ಅನುಭವ ಮತ್ತು ಭವಿಷ್ಯದ ವೃತ್ತಿ ಬೆಳವಣಿಗೆ.
ನಮ್ಮ ಕೊನೆ ಮಾತು:
PGCIL ನೇಮಕಾತಿ 2025 ಪ್ರಸ್ತುತವಾಗಿ Electrical, Civil ಮತ್ತು Electronics ವಿಭಾಗದ ಯುವ ಇಂಜಿನಿಯರ್ಗಳು ಹಾಗೂ ಡಿಪ್ಲೋಮಾ ಹುದ್ದೆದಾರರಿಗೆ ಒಂದು ಒಳ್ಳೆ ಅವಕಾಶ. ಉತ್ತಮ ವೇತನ, ಉದ್ಯೋಗ ಭದ್ರತೆ ಮತ್ತು ರಾಷ್ಟ್ರ ಮಟ್ಟದ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುವ ಅವಕಾಶದಿಂದ ಇದು ಅತ್ಯಂತ ಆಕರ್ಷಕ ಉದ್ಯೋಗವಾಗಿದೆ.
ಅರ್ಹ ಅಭ್ಯರ್ಥಿಗಳು ತಡಮಾಡದೆ ಅಧಿಕೃತ ವೆಬ್ಸೈಟ್ powergrid.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಸಮಯ ಮೀರಿದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ನಿಮ್ಮ ಭವಿಷ್ಯದ ಕನಸುಗಳಿಗೆ ಇದು ದೊಡ್ಡ ಯಾಗಬಹುದು ಎಂದು ಭಾವಿಸುತ್ತಾ ಇಂದಿನ ಈ ಒಂದು ಲೇಖನ ಮುಕ್ತಾಯವಾಗಲಿದೆ ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳಿವೆ ಗಮನಿಸಿ!
📌ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಪ್ಲೈ ಲಿಂಕ್ Apply Link | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |