ಹುಬ್ಬಳ್ಳಿ ಕಾಟನ್ ಕಾರ್ಪೊರೇಷನ್ ನೇಮಕಾತಿ 2025:  ಅಸಿಸ್ಟೆಂಟ್ ಹಾಗೂ ಆಫೀಸ್ ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ಹುಬ್ಬಳ್ಳಿ ಕಾಟನ್ ಕಾರ್ಪೊರೇಷನ್ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲ ತಿಳಿದಿರುವ ಹಾಗೆ ಪ್ರತಿ ವರ್ಷ ಸಾವಿರಾರು ಪದವೀಧರರು ಸರ್ಕಾರಿ ಉದ್ಯೋಗಗಳತ್ತ ಮುಖ ಮಾಡುತ್ತಾರೆ ಆದರೆ ಅದರಲ್ಲಿ ಕೆಲವೇ ಕೆಲವು ಜನಗಳಿಗೆ ಬೆರಣಿಕೆಯಂತೆ ಸರ್ಕಾರಿ ಹುದ್ದೆಗಳು ದೊರೆಯುತ್ತೆ. ಉದ್ಯೋಗದಲ್ಲಿ ಸ್ಥಿರತೆ, ಉತ್ತಮ ವೇತನ ಹಾಗೂ ಅನುಭವ ಎನ್ನುವವು ಈ ಹುದ್ದೆಗಳ ಪ್ರಮುಖ ಆಕರ್ಷಣೆ. 

WhatsApp Group Join Now
Telegram Group Join Now

ಹುಬ್ಬಳ್ಳಿಯ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಯಾವುದೇ ಪರೀಕ್ಷೆ ಇಲ್ಲದೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ (Cotton Corporation of India – CCI) ಸಂಸ್ಥೆಯು 2025 ನೇ ಸಾಲಿನ ನೇಮಕಾತಿಯನ್ನು ಘೋಷಿಸಿದ್ದು, ಈ ಬಾರಿ ಫೀಲ್ಡ್ ಅಸಿಸ್ಟೆಂಟ್ ಹಾಗೂ ಆಫೀಸ್ ಕ್ಲರ್ಕ್ (ಜೆನರಲ್ ಮತ್ತು ಅಕೌಂಟ್ಸ್) ಹುದ್ದೆಗಳಿಗಾಗಿ ವಾಕ್-ಇನ್  ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ.

ಇಲ್ಲಿ ನೋಡಿ ನಿಮಗೆ ಯಾವುದೇ ತರಹದ ಪರೀಕ್ಷೆಗಳಿರುವುದಿಲ್ಲ ಆದರೆ ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ ಡಿಗ್ರಿ ಪಾಸಾದರೆ ನಡೆಯುತ್ತೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು  ತಮ್ಮ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ಸರಳ ವಿಧಾನ. ಕಡಿಮೆ ಅವಧಿಯ ತಾತ್ಕಾಲಿಕ ಹುದ್ದೆಯಾಗಿದ್ದರೂ, ಸರ್ಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವಕಾಶ ಬಹುಮೌಲ್ಯವಾದ ಅನುಭವ ನೀಡುತ್ತದೆ.

ಇಂದಿನ ಈ ಒಂದು ಲೇಖನದಲ್ಲಿ ನಾವು CCI ನೇಮಕಾತಿ 2025 ಕುರಿತಂತೆ ಅರ್ಹತೆ, ಸಂಬಳ, ಆಯ್ಕೆ ವಿಧಾನ, ಅಗತ್ಯ ದಾಖಲೆಗಳು ಹಾಗೂ ಸಂದರ್ಶನ ದಿನಾಂಕಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ಬಗ್ಗೆ ವಿವರಣೆ:

Table of Contents

ನೀವು ಮೊದಲ ಬಾರಿಗೆ ಕಾಟನ್ ಕಾರ್ಪೊರೇಷನ್ ಎಂಬ ಹೆಸರು ಕೇಳುತ್ತಿದ್ದಾರೆ ಸರಿಯಾಗಿ ಮಾಹಿತಿ ಓದಿ ಅದೇನೆಂದರೆ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ 1970ರಲ್ಲಿ ಸ್ಥಾಪನೆಯಾದ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಇದು ವಸ್ತ್ರ ಸಚಿವಾಲಯ, ಭಾರತ ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. 

ಈ ಸಂಸ್ಥೆಯ ಮುಖ್ಯ ಉದ್ದೇಶವು ಹತ್ತಿ ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡುವುದಾಗಿದೆ, ನ್ಯಾಯಸಮ್ಮತ ಬೆಲೆಗಳನ್ನು ಖಾತ್ರಿ ಪಡಿಸುವುದು ಹಾಗೂ ಹತ್ತಿಯ ಸಪ್ಲೈ ಸರಪಳಿಯನ್ನು ಸುಗಮಗೊಳಿಸುವುದು ಗುರಿಯಾಗಿರುತ್ತದೆ.

ದೇಶದ ಪ್ರಮುಖ ಹತ್ತಿ ಬೆಳೆಗಾರ ರಾಜ್ಯಗಳಲ್ಲಿ ಖರೀದಿ, ಮಾರಾಟ ಹಾಗೂ ಬೆಲೆ ಬೆಂಬಲ ಕಾರ್ಯಚರಣೆಗಳಲ್ಲಿ CCI ಮಹತ್ವದ ಪಾತ್ರವಹಿಸಿದೆ. ಈ ಸಂಸ್ಥೆಯಲ್ಲಿ ತಾತ್ಕಾಲಿಕವಾದರೂ ಕೆಲಸ ಮಾಡುವುದರಿಂದ ಕೃಷಿ ಮಾರುಕಟ್ಟೆ, ವಸ್ತ್ರೋದ್ಯಮ ಮತ್ತು ಸರ್ಕಾರಿ ಕಾರ್ಯಪದ್ಧತಿ ಕುರಿತು ಯುವಕರಿಗೆ ನೇರ ಅನುಭವ ಸಿಗುತ್ತದೆ.

ನೇಮಕಾತಿಯ ಮುಖ್ಯ ಅಂಶಗಳು 2025:

  • ನೇಮಕಾತಿ ಸಂಸ್ಥೆ: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ಪ್ರಸ್ತುತ ಹುಬ್ಬಳ್ಳಿಯಲ್ಲಿ ಹುದ್ದೆ ಕಾಲಿಗಿದೆ.
  • ಹುದ್ದೆಗಳು:
    • ಫೀಲ್ಡ್ ಅಸಿಸ್ಟೆಂಟ್
    • ಆಫೀಸ್ ಕ್ಲರ್ಕ್ (ಜೆನರಲ್)
    • ಆಫೀಸ್ ಕ್ಲರ್ಕ್ (ಅಕೌಂಟ್ಸ್)
  • ಉದ್ಯೋಗ ಸ್ವರೂಪ: ತಾತ್ಕಾಲಿಕ, ಒಪ್ಪಂದ ಆಧಾರಿತ
  • ಆಯ್ಕೆ ವಿಧಾನ: ವಾಕ್-ಇನ್ ಸಂದರ್ಶನ
  • ಕೆಲಸದ ಸ್ಥಳ: CCI ಹುಬ್ಬಳ್ಳಿ ಶಾಖಾ ಕಚೇರಿ ವ್ಯಾಪ್ತಿಯೊಳಗೆ
  • ಮಾಸಿಕ ವೇತನ:
    • ಫೀಲ್ಡ್ ಅಸಿಸ್ಟೆಂಟ್ – ₹37,000
    • ಆಫೀಸ್ ಕ್ಲರ್ಕ್ (ಜೆನರಲ್) – ₹25,500
    • ಆಫೀಸ್ ಕ್ಲರ್ಕ್ (ಅಕೌಂಟ್ಸ್) – ₹25,500

ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು:

  • ಫೀಲ್ಡ್ ಅಸಿಸ್ಟೆಂಟ್ ಹಾಗೂ ಆಫೀಸ್ ಕ್ಲರ್ಕ್ (ಜೆನರಲ್) ಸಂದರ್ಶನ: 17 ಸೆಪ್ಟೆಂಬರ್ 2025
  • ಆಫೀಸ್ ಕ್ಲರ್ಕ್ (ಅಕೌಂಟ್ಸ್) ಸಂದರ್ಶನ: 18 ಸೆಪ್ಟೆಂಬರ್ 2025
  • ಸಮಯ: ಬೆಳಗ್ಗೆ 10:30 ರಿಂದ ಸಂಜೆ 5:00ರವರೆಗೆ
  • ಸ್ಥಳ:
    Cotton Corporation of India Ltd.,
    3rd Floor, W.B. Plaza, New Cotton Market,
    ಹುಬ್ಬಳ್ಳಿ – 580029, ಕರ್ನಾಟಕ

ಅಭ್ಯರ್ಥಿಗಳಿಗೆ ವಿಶೇಷ ಸಲಹೆ: ಕನಿಷ್ಠ 30–45 ನಿಮಿಷಗಳ ಮುಂಚೆಯೇ ಸ್ಥಳಕ್ಕೆ ಹಾಜರಾಗುವುದು ಬಹಳ ಉತ್ತಮ.

ಹುದ್ದೆಗಳ ವಿವರಗಳು: 

ಈ ಬಾರಿ ಪ್ರಕಟಣೆಯಲ್ಲಿ ಖಾಲಿ ಹುದ್ದೆಗಳ ನಿಖರ ಸಂಖ್ಯೆ ನೀಡಲಾಗಿಲ್ಲ ನಿಮಗೆ ನಿಖರ ಸಂಖ್ಯೆ ಬೇಕಾಗಿದ್ದರೆ ಹುದ್ದೆಯ ಕುರಿತು ಅಧಿಕೃತ ಆದಿ ಸೂಚನೆಯನ್ನು ಚೆಕ್ ಮಾಡಬಹುದು ನಾವು ನಿಮಗೊಂದು ಒದಗಿಸುತ್ತೇವೆ. 

ಸಾಮಾನ್ಯವಾಗಿ ಹತ್ತಿ ಖರೀದಿ ಕಾಲದಲ್ಲಿ ಶಾಖಾ ಕಚೇರಿಗೆ ಬೇಕಾಗುವಷ್ಟು ಸಿಬ್ಬಂದಿಯನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಅವಧಿ ಸರಾಸರಿ 85 ದಿನಗಳು ಇರುತ್ತದೆ. ಆದಾಗ್ಯೂ ಈ ಅನುಭವ ಮುಂದಿನ ಉದ್ಯೋಗಾವಕಾಶಗಳಿಗೆ ಪೂರಕವಾಗುವ ಸಾಧ್ಯತೆ ಇರುತ್ತೆ.

ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

  • ಫೀಲ್ಡ್ ಅಸಿಸ್ಟೆಂಟ್: B.Sc. (ಕೃಷಿ) ಪದವಿ – ಸಾಮಾನ್ಯ/OBC ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು, SC/ST/ವಿಕಲಚೇತನರಿಗೆ 45%. ಕಂಪ್ಯೂಟರ್ ತಿಳುವಳಿಕೆ ಅಗತ್ಯ.
  • ಆಫೀಸ್ ಕ್ಲರ್ಕ್ (ಅಕೌಂಟ್ಸ್): B.Com ಪದವಿ – ಮೇಲ್ಕಂಡ ಅಂಕಗಳ ಮಾನದಂಡ ಅನ್ವಯ. ಕಂಪ್ಯೂಟರ್ ಜ್ಞಾನ ಅವಶ್ಯಕ.
  • ಆಫೀಸ್ ಕ್ಲರ್ಕ್ (ಜೆನರಲ್): ಯಾವುದೇ ಪದವಿ – ಮೇಲ್ಕಂಡ ಅಂಕಗಳ ಮಾನದಂಡ ಅನ್ವಯ. ಕಂಪ್ಯೂಟರ್ ತಿಳುವಳಿಕೆ ಅಗತ್ಯ.

ವಯೋಮಿತಿ ಎಷ್ಟಿರಬೇಕು..?

  • ಗರಿಷ್ಠ ವಯಸ್ಸು: 35 ವರ್ಷ (1 ಸೆಪ್ಟೆಂಬರ್ 2025ರ ಹೊತ್ತಿಗೆ)
  • ವಯೋಸಡಿಲಿಕೆ:
    • SC/ST ಅಭ್ಯರ್ಥಿಗಳಿಗೆ 5 ವರ್ಷ
    • OBC (Non-Creamy Layer) ಅಭ್ಯರ್ಥಿಗಳಿಗೆ 3 ವರ್ಷ
    • ವಿಕಲಚೇತನರಿಗೆ ಗರಿಷ್ಠ 10 ವರ್ಷ (ಹಾಗೂ ಹೆಚ್ಚುವರಿ ಸಡಿಲಿಕೆ ಅನ್ವಯವಾಗಬಹುದು)

ಸಂಬಳದ ವಿವರಣೆ:

  • ಫೀಲ್ಡ್ ಅಸಿಸ್ಟೆಂಟ್: ₹37,000 ಪ್ರತಿ ತಿಂಗಳು
  • ಆಫೀಸ್ ಕ್ಲರ್ಕ್ (ಜೆನರಲ್): ₹25,500 ಪ್ರತಿ ತಿಂಗಳು
  • ಆಫೀಸ್ ಕ್ಲರ್ಕ್ (ಅಕೌಂಟ್ಸ್): ₹25,500 ಪ್ರತಿ ತಿಂಗಳು

ಈ ಹುದ್ದೆಗಳು ತಾತ್ಕಾಲಿಕವಾಗಿರುವುದರಿಂದ ಹೆಚ್ಚುವರಿ ಭತ್ಯೆಗಳನ್ನು ನೀಡಲಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ..?

ಈ ಹುದ್ದೆಗಳಲ್ಲಿ ಮುಖ್ಯವಾಗಿ ಎಲ್ಲರನ್ನೂ ಆಕರ್ಷಣೆಗೆ ಒಳಗ ಮಾಡುವುದು ಅದೇನೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯುವುದು.

  • ಅರ್ಜಿ ನಮೂನೆ ಡೌನ್‌ಲೋಡ್ ಮಾಡುವುದು (CCI ಅಧಿಕೃತ ಜಾಲತಾಣದಲ್ಲಿ ಲಭ್ಯ).
  • ಅಗತ್ಯ ದಾಖಲೆಗಳನ್ನು ತಯಾರಿಸಿ ಮೂಲ ಹಾಗೂ ಪ್ರತಿ ಪ್ರತಿಗಳನ್ನು ಕೊಂಡೊಯ್ಯುವುದು.
  • ನಿರ್ದಿಷ್ಟ ದಿನಾಂಕದಲ್ಲಿ ಹುಬ್ಬಳ್ಳಿ ಕಚೇರಿಗೆ ಹಾಜರಾಗಿ ಸಂದರ್ಶನದಲ್ಲಿ ಭಾಗವಹಿಸುವುದು.
  • ದಾಖಲೆಗಳ ಪರಿಶೀಲನೆ.
  • ಸಂದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ.

ಸಂದರ್ಶನಕ್ಕೆ ತರಬೇಕಾದ ಪ್ರಮುಖ ದಾಖಲೆಗಳು:

  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
  • ಭರ್ತಿ ಮಾಡಿದ ಅರ್ಜಿ ನಮೂನೆ (CCI ಜಾಲತಾಣದಿಂದ ಡೌನ್‌ಲೋಡ್ ಮಾಡುವುದು)
  • ಜನ್ಮದಾಖಲೆ (SSLC ಮಾರ್ಕ್ಸ್ ಕಾರ್ಡ್/ಆಧಾರ್/ಜನ್ಮ ಪ್ರಮಾಣಪತ್ರ)
  • ಎಲ್ಲಾ ಶಿಕ್ಷಣ ಪ್ರಮಾಣ ಪತ್ರಗಳು ಮತ್ತು ಅಂಕಪಟ್ಟಿಗಳು
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ವಿಕಲಚೇತನ ಪ್ರಮಾಣ ಪತ್ರ (ಅಗತ್ಯವಿದ್ದರೆ)
  • ಗುರುತು ಚೀಟಿ (ಆಧಾರ್/ಪ್ಯಾನ್/ವೋಟರ್ ಐಡಿ)

ಅಭ್ಯರ್ಥಿಗಳಿಗೆ ವಿಶೇಷ ಸಲಹೆ: ಎಲ್ಲಾ ದಾಖಲೆಗಳನ್ನು ಸರಿಯಾಗಿ ಫೈಲ್‌ನಲ್ಲಿ ಜೋಡಿಸಿ ಕೊಂಡೊಯ್ಯುವುದು ಸೂಕ್ತವಾಗಿರುತ್ತೆ.

ಯಾಕೆ ಈ ಹುದ್ದೆಗಳಿಗೆ ಅರ್ಜಿ ಹಾಕಬೇಕು?

  • ಸರಳ ಆಯ್ಕೆ ಪ್ರಕ್ರಿಯೆ: ಯಾವುದೇ ಪರೀಕ್ಷೆಗಳಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡುತ್ತಾರೆ.
  • ಆಕರ್ಷಕ ಸಂಬಳ: ತಾತ್ಕಾಲಿಕ ಹುದ್ದೆಯಾದರೂ ಉತ್ತಮ ವೇತನ ದೊರೆಯುತ್ತೆ.
  • ಸರ್ಕಾರಿ ಅನುಭವ: ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಅನುಭವ.
  • ನೆಟ್‌ವರ್ಕಿಂಗ್ ಅವಕಾಶ: ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮ ತಜ್ಞರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವ ಅವಕಾಶ ದೊರೆಯುತ್ತೆ.
  • ರೆಜ್ಯೂಮ್‌ಗೆ ಮೌಲ್ಯ: ಮುಂದಿನ ಸರ್ಕಾರಿ ಅಥವಾ ಖಾಸಗಿ ಉದ್ಯೋಗಾವಕಾಶಗಳಲ್ಲಿ ಪ್ಲಸ್ ಪಾಯಿಂಟ್.

ವಾಕ್-ಇನ್ ಸಂದರ್ಶನದಲ್ಲಿ ಯಶಸ್ವಿಯಾಗಲು ಪ್ರಮುಖ ಹಾಗೂ ಮುಖ್ಯ ಸಲಹೆಗಳು:

  • ವೃತ್ತಿಪರ ಉಡುಗೆ: ಸರಳ ಹಾಗೂ ಕ್ಲಾಸಿಕ್ ಫಾರ್ಮಲ್ ಉಡುಪಿನಲ್ಲಿ ಹಾಜರಾಗುವುದು.
  • ಹೆಚ್ಚುವರಿ ಪ್ರತಿಗಳು: ಎಲ್ಲಾ ದಾಖಲೆಗಳ ಹೆಚ್ಚುವರಿ ಫೋಟೋಕಾಪಿ ಕೊಂಡೊಯ್ಯುವುದು.
  • CCI ಬಗ್ಗೆ ತಿಳಿದುಕೊಳ್ಳಿ: ಸಂಸ್ಥೆಯ ಕಾರ್ಯಪದ್ಧತಿ ಹಾಗೂ ಹತ್ತಿ ಖರೀದಿ ಪ್ರಕ್ರಿಯೆಯ ಕುರಿತು ಓದಿ.
  • ಆತ್ಮವಿಶ್ವಾಸ: ಸಂದರ್ಶನದಲ್ಲಿ ಸ್ಪಷ್ಟವಾಗಿ ಮಾತನಾಡುವುದು.
  • ಪಂಕ್ಚುಯಾಲಿಟಿ: ಸಮಯಕ್ಕೆ ಮುಂಚೆಯೇ ಹಾಜರಾಗುವುದು.

ನಮ್ಮ ಕೊನೆಯ ಮಾತು: 

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಸ್ತುತ ಹುಬ್ಬಳ್ಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡುತ್ತಿದೆ ಇದೊಂದು ನಾವು ಗೋಲ್ಡನ್ ಆಪರ್ಚುನಿಟಿ ಎಂದರು ಸಹ ತಪ್ಪಾಗದು ಏಕೆಂದರೆ ಇಂತಾ ಸಂದರ್ಭದಲ್ಲಿ ಅದರಲ್ಲಿಯೂ ಪದವಿಯಾದವರಿಗೆ ಬಿ ಎಸ್ ಸಿ ಆದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಇದೊಂದು ಅದ್ಭುತ ಸಂಗತಿ ಎಂದು ಹೇಳಬಹುದು ಅಷ್ಟೇ ಅಲ್ಲದೆ ಇದು ಕೇವಲ 85 ದಿನಗಳ ಅವಧಿವರೆಗೆ ಒಂದು ಹುದ್ದೆಯಾಗಿರುತ್ತೆ ಗಮನಿಸಿ ನಿಮಗೆ ಕೊನೆಯವರೆಗೂ ಈ ಹುದ್ದೆ ಅಂದರೆ ಅರವತ್ತು ವರ್ಷಗಳ ಆಗೋವರೆಗೂ ನೀಡಿದ್ದೇವೆ ಸರಿಯಾಗಿ ನೋಡಿ. 

ಹಾಗೆ ನೀವೇನಾದರೂ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ ಎದಕ್ಕೆ ತಯಾರಿ ಸಲಹೆಗಳು ಏನೆಲ್ಲ ಇರುತ್ತೆ ಚೆಕ್ ಮಾಡಿ ನೋಡಿ ಅರ್ಜಿ ಸಲ್ಲಿಸಿ. 

ಪ್ರತಿದಿನ ಇದೇ ತರನಾಗಿ ಉದ್ಯೋಗದ ಮಾಹಿತಿಗಳು ನಿಮಗೆ ಬೇಕಾಗಿದ್ದರೆ ನಾವು ನಿಮಗಂತೆ ಇದ್ದೇವೆ ಹೀಗಾಗಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಬಹುದು ನಾವಿಲ್ಲಿ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ.

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF Notification PDFClick Here
ಅಧಿಕೃತ ವೆಬ್ಸೈಟ್ Official WebsiteClick Here


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here

ಹೆಚ್ಚು ಕೇಳಲಾಗುವ ಪ್ರಶ್ನೆಗಳು (FAQ)

1. ಅರ್ಜಿ ಶುಲ್ಕವಿದೆಯೇ?

ಇಲ್ಲ, ಯಾವುದೇ ಅರ್ಜಿ ಶುಲ್ಕವಿಲ್ಲ. ಅಭ್ಯರ್ಥಿಗಳು ಉಚಿತವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ಒಂದು ವೇಳೆ ನಿಮಗೇನಾದರೂ ಅರ್ಜಿ ಶುಲ್ಕದ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನೀವು ಅಧಿಕೃತ ಆದಿ ಸೂಚನೆ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು ಪಿಡಿಎಫ್ ಲಿಂಕ್ ಕೆಳಗಡೆ ಒದಗಿಸಲಾಗಿದೆ ಆರ್ಟಿಕಲ್ ಕೊನೆಯಲ್ಲಿ.

2. ಈ ಹುದ್ದೆಗಳು ಎಷ್ಟು ದಿನಗಳ ಕಾಲ ಇರುತ್ತವೆ?

ಸರಾಸರಿ 85 ದಿನಗಳ ಕಾಲ ಮಾತ್ರ ಈ ಹುದ್ದೆ ಮಾನ್ಯವಾಗಿರುತ್ತದೆ. ಗಮನಿಸಿ ಇಲ್ಲಿ ಕೇವಲ ನೀವು 85 ದಿನಗಳ ಮಾತ್ರ ಹುದ್ದೆ ಇರುತ್ತೆ ಮುಂದೆ ಕಂಟಿನ್ಯೂ ಆದರೂ ಆಗಬಹುದು ಅಥವಾ ಇಲ್ಲ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ಪಿಡಿಎಫ್ ಚೆಕ್ ಮಾಡಿ.

3. ಕರ್ನಾಟಕ ಹೊರಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?

ಹೌದು, ಆದರೆ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚು. ನೀವು ನಮ್ಮ ಕರ್ನಾಟಕದವರು ಅದರಲ್ಲಿ ಕನ್ನಡದವರಾಗಿದ್ದರೆ ಮೊದಲ ಆದ್ಯತೆ ದೊರೆಯುತ್ತದೆ ನೋಡಿ ಬೇಗ ಬೇಗ ಅರ್ಜಿ ಸಲ್ಲಿಸಿ ಲಿಮಿಟೆಡ್ ಇರುತ್ತೆ ಇಂತಹ ಅವಕಾಶಗಳು.

4. ಲಿಖಿತ ಪರೀಕ್ಷೆ ನಡೆಯುತ್ತದೆಯೇ?

ಇಲ್ಲ, ಆಯ್ಕೆ ಸಂಪೂರ್ಣವಾಗಿ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಆಧಾರಿತ. ನುಡಿ ಇದೊಂದು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಸಂದರ್ಶನದ ಮೂಲಕ ಡೈರೆಕ್ಟ್ ಇಂಟರ್ವ್ಯೂ ಬರುತ್ತೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

5. ಹೊಸ ಪದವೀಧರರು ಅರ್ಜಿ ಹಾಕಬಹುದೇ?

ಹೌದು, ನಿಗದಿತ ಅರ್ಹತೆ ಹಾಗೂ ವಯೋಮಿತಿಯೊಳಗಿನ ಹೊಸ ಪದವೀಧರರು ಅರ್ಜಿ ಹಾಕಬಹುದು. ನೋಡಿ ಪದವಿ ಎಂದರೆ ನಿರ್ದಿಷ್ಟವಾಗಿ ಇದೇ ಪದವಿ ಆಗಬೇಕು ಎಂದಿಲ್ಲ ನಿಮ್ಮದು ಯಾವುದೇ ಪದವಿ ಮುಗಿದಿರಲಿ ಅಂದ್ರೆ ಯಾವುದೇ ಡಿಗ್ರಿ ಮುಗಿದಿರಲಿ ನೀವು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment