ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಇನ್ಫೋಸಿಸ್ ಸ್ಕಾಲರ್ಶಿಪ್ ಸ್ಕಾಲರ್ಶಿಪ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಲು ಬಯಸುತ್ತಿರುವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಅತ್ಯಂತ ಮುಖ್ಯ ಸಂಗತಿ ಯಾಗಿರುತ್ತೆ. ಅನೇಕ ವಿದ್ಯಾರ್ಥಿಗಳು ಪ್ರತಿಭೆ ಮತ್ತು ಆಸಕ್ತಿಯಿದ್ದರೂ ಆರ್ಥಿಕ ತೊಂದರೆಯಿಂದ ತಮ್ಮ ಕನಸುಗಳನ್ನು ಸಾಧಿಸಲು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಫೌಂಡೇಶನ್ ಆರಂಭಿಸಿರುವ Infosys STEM Scholarship ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶವನ್ನು ಒದಗಿಸಿದೆ.
ಇಂದಿನ ಈ ಲೇಖನದಲ್ಲಿ ನಾವು ಇನ್ಫೋಸಿಸ್ STEM ವಿದ್ಯಾರ್ಥಿವೇತನ 2025 ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ ಅಂದರೆ ಇದರಿಂದಾಗುವ ಅರ್ಹತೆ, ಪ್ರಯೋಜನಗಳು, ಅಗತ್ಯ ದಾಖಲೆಗಳು, ಆಯ್ಕೆ ಪ್ರಕ್ರಿಯೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ ಲೇಖನವನ್ನ ಕೊನೆಯವರೆಗೂ ಓದಿ.
ಇದನ್ನು ಓದಿ:ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ 2025.! 36,000 ಸಿಗುತ್ತೆ ವರ್ಷಕ್ಕೆ.!!
ಇನ್ಫೋಸಿಸ್ STEM ವಿದ್ಯಾರ್ಥಿವೇತನ ಎಂದರೇನು ತಿಳಿದುಕೊಳ್ಳಿ..?
Table of Contents
ಇನ್ಫೋಸಿಸ್ STEM ವಿದ್ಯಾರ್ಥಿವೇತನವು ಭಾರತದಲ್ಲಿ STEM (Science, Technology, Engineering, Mathematics) ಕ್ಷೇತ್ರದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಒಂದು ವಿಶೇಷ ಕಾರ್ಯಕ್ರಮವಾಗಿದೆ ಅಂದರೆ ಇಂತಹ ಕ್ಷೇತ್ರಗಳಲ್ಲಿ ಪದವಿ ಪಡೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಇದು ಸಿಗಲಿದೆ.
ಈ ಸ್ಕಾಲರ್ಶಿಪ್ ಇನ್ಫೋಸಿಸ್ ಫೌಂಡೇಶನ್ ಆರಂಭಿಸಿದ್ದು, ಇದರ ಮುಖ್ಯ ಉದ್ದೇಶವು ಹಿಂದುಳಿದ ಆರ್ಥಿಕ ಹಿನ್ನೆಲೆಯಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸಹಾಯ ಮಾಡುವುದು. ವಿಶೇಷವಾಗಿ ಹುಡುಗಿಯರು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ದೊಡ್ಡ ಬೆಂಬಲವಾಗಿರುತ್ತೆ.
ವಿದ್ಯಾರ್ಥಿವೇತನದ ಪ್ರಮುಖ ಉದ್ದೇಶಗಳು ತಿಳಿದುಕೊಳ್ಳಿ:

- ಆರ್ಥಿಕ ನೆರವು ಒದಗಿಸುತ್ತದೆ – ಶಿಕ್ಷಣವನ್ನು ಮುಂದುವರಿಸಲು ಹಣಕಾಸಿನ ಅಡಚಣೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಇದು ಬಹಳ ಬೆಂಬಲ ಅವರಿಗೆ ಇರುತ್ತೆ.
- ಹುಡುಗಿಯರ ಶಿಕ್ಷಣ ಪ್ರೋತ್ಸಾಹ – ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹುಡುಗಿಯರ ಭಾಗವಹಿಸುವಿಕೆಯನ್ನು ಹೆಚ್ಚಿಗೆ ಮಾಡುತ್ತೆ.
- STEM ಕ್ಷೇತ್ರದಲ್ಲಿ ಪರಿಣತಿ ಬೆಳೆಸುವುದು – ಮುಂದಿನ ದಿನಗಳಲ್ಲಿ ಭಾರತವನ್ನು ತಂತ್ರಜ್ಞಾನದಲ್ಲಿ ಮುಂಚೂಣಿಗೆ ತರಲು ತಜ್ಞರನ್ನು ರೂಪಿಸುವುದು ಕಾರ್ಯ ಮಾಡುತ್ತೆ.
- ಗ್ರಾಮೀಣ ಪ್ರತಿಭೆಗಳ ಉತ್ತೇಜನ – ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಕಲ್ಪಿಸುವುದು.
ವಿದ್ಯಾರ್ಥಿವೇತನದ ಪ್ರಮುಖ ವೈಶಿಷ್ಟಗಳೇನು ತಿಳಿದುಕೊಳ್ಳಿ.!
- ವಿದ್ಯಾರ್ಥಿವೇತನವು STEM ವಿಷಯಗಳಲ್ಲಿ ಪದವಿ ಪಠ್ಯಕ್ರಮ ಓದುತ್ತಿರುವಂತವರಿಗೆ ಮಾತ್ರ ಅನ್ವಯಿಸುತ್ತದೆ.
- ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಯೋಜನೆಯಿಂದ ಲಾಭ ಪಡೆಯುತ್ತಾರೆ.
- ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ, ಪುಸ್ತಕ ಖರೀದಿ ಹಾಗೂ ಇತರೆ ಅಗತ್ಯ ವೆಚ್ಚಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ.
- ವಿಶೇಷವಾಗಿ ಮಹಿಳಾ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಅರ್ಹತೆ ಏನಿರಬೇಕು.? (Eligibility Criteria)
Infosys STEM Scholarship ಪಡೆಯಲು ವಿದ್ಯಾರ್ಥಿಗಳು ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು ಅಂದರೆ ಪೂರೈಸಬೇಕು:
- ಶೈಕ್ಷಣಿಕ ಅರ್ಹತೆ
- ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ ವಿಷಯಗಳಲ್ಲಿ ಪದವಿ (Undergraduate Course) ಓದುತ್ತಿರಬೇಕು.
- 12ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳು ಪಡೆದಿರಬೇಕು.
- ಆರ್ಥಿಕ ಹಿನ್ನೆಲೆ..?
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಇರಬೇಕು.
- BPL ಅಥವಾ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಆದ್ಯತೆ ಒದಗಿಸಲಾಗುತ್ತೆ.
- ಪ್ರಾದೇಶಿಕ ಅರ್ಹತೆ ಏನಿರಬೇಕು.?
- ನಮ್ಮ ಭಾರತದಲ್ಲಿನ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಹಾಕಬಹುದು.
- ಹೆಚ್ಚುವರಿ ಮಾನದಂಡಗಳು ಏನಿರಬೇಕು.?
- ವಿದ್ಯಾರ್ಥಿ ಪ್ರಥಮ ವರ್ಷದಲ್ಲಿರಬಹುದು ಅಥವಾ ಈಗಾಗಲೇ ಪದವಿ ಕೋರ್ಸ್ ಮುಂದುವರಿಸುತ್ತಿರುವಂತವರು.
- ಹುಡುಗಿಯರಿಗೆ ವಿಶೇಷ ಆದ್ಯತೆ.
- ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ವೆಬ್ಸೈಟ್ ಚೆಕ್ ಮಾಡಿ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:

ಅರ್ಜಿಯನ್ನು ಸಲ್ಲಿಸುವಾಗ ವಿದ್ಯಾರ್ಥಿಗಳು ಕೆಳಗಿನ ದಾಖಲೆಗಳನ್ನು ಕಡಾ ಖಂಡಿತ ಸಿದ್ಧಪಡಿಸಬೇಕು:
- 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ (Marksheet)
- ಪದವಿ ಪ್ರವೇಶ ಪತ್ರ ಅಥವಾ ಕಾಲೇಜು ಐಡಿ ಕಾರ್ಡ್
- ಕುಟುಂಬದ ಆದಾಯ ಪ್ರಮಾಣ ಪತ್ರ (Income Certificate)
- ಆಧಾರ್ ಕಾರ್ಡ್ ಅಥವಾ ಇನ್ನಿತರೆ ಮಾನ್ಯ ಗುರುತಿನ ಚೀಟಿ
- ಬ್ಯಾಂಕ್ ಖಾತೆ ವಿವರಗಳು (Bank Passbook copy)
- ಪಾಸ್‌ಪೋರ್ಟ್ ಸೈಸ್ ಫೋಟೋ
ವಿದ್ಯಾರ್ಥಿವೇತನದ ಪ್ರಯೋಜನಗಳೇನು.?
Infosys STEM Scholarship ವಿದ್ಯಾರ್ಥಿಗಳಿಗೆ ನೀಡುವ ಆರ್ಥಿಕ ನೆರವು ಕೆಳಗಿನ ಕ್ಷೇತ್ರಗಳನ್ನು ಒಳಗೊಂಡಿರುತ್ತೆ ಆ ಕ್ಷೇತ್ರಗಳು ಯಾವುವು ತಿಳಿದುಕೊಳ್ಳಿ:
- ವಾರ್ಷಿಕ ಕಾಲೇಜು ಶುಲ್ಕ ಪಾವತಿಗೆ ಸಹಾಯ ಒದಗಿಸುತ್ತ.
- ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು ಖರೀದಿಗೆ ನೆರವು
- ಅಗತ್ಯವಿದ್ದಲ್ಲಿ ವಸತಿ ವೆಚ್ಚ ಅಥವಾ ಇತರೆ ಶೈಕ್ಷಣಿಕ ವೆಚ್ಚಗಳಿಗೆ ಸಹಾಯ
- ಪ್ರತಿ ವರ್ಷ ವಿದ್ಯಾರ್ಥಿಗಳ ಸಾಧನೆ ಆಧರಿಸಿ ವಿದ್ಯಾರ್ಥಿವೇತನವನ್ನು ಮುಂದುವರಿಸುವ ಅವಕಾಶ
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ.?
ವಿದ್ಯಾರ್ಥಿವೇತನದ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯುತ್ತದೆ ಯಾವುದೇ ತರಹದ ಮೋಸಗಳು ಇರುವುದಿಲ್ಲ. ಹಂತಗಳು ಈ ಕೆಳಗಿನಂತಿವೆ:
- ಆನ್‌ಲೈನ್ ಅರ್ಜಿ – ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ದಯವಿಟ್ಟು ತಿಳಿದುಕೊಳ್ಳಿ ಅರ್ಜಿ ಕೊನೆ 15 ಸೆಪ್ಟೆಂಬರ್ 2025.
- ದಾಖಲೆ ಪರಿಶೀಲನೆ – ಸಲ್ಲಿಸಿದ ದಾಖಲೆಗಳನ್ನು ಆಯೋಜಕರು ಪರಿಶೀಲಿಸುತ್ತಾರೆ.
- ಅಂಕಗಳ ಆಧಾರ – 12ನೇ ತರಗತಿ ಹಾಗೂ ಪ್ರಸ್ತುತ ಪದವಿ ಫಲಿತಾಂಶ ಆಧಾರವಾಗಿ ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
- (Interview) ಅಥವಾ ಲಿಖಿತ ಪರೀಕ್ಷೆ – ಕೆಲ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಪರೀಕ್ಷಿಸಲು ಸಂದರ್ಶನ ನಡೆಸಬಹುದು ಅಥವಾ ನಡೆಸದೇ ಇರಬಹುದು.
- ಅಂತಿಮ ಆಯ್ಕೆ – ಆಯ್ಕೆಗೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಮತ್ತು ಆರ್ಥಿಕ ನೆರವು ಬಿಡುಗಡೆ ಮಾಡಲಾಗುತ್ತದೆ ಇಲ್ಲಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು?
- ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
- ವಿದ್ಯಾರ್ಥಿ ನೋಂದಣಿ (Registration) ಮಾಡಿ, ಖಾತೆ ಸೃಷ್ಟಿಸಿಕೊಳ್ಳಿ.
- ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.
- ಬೇಕಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ.
- ಅರ್ಜಿಯನ್ನು ಸಲ್ಲಿಸಿದ ನಂತರ ರಿಜಿಸ್ಟ್ರೇಷನ್ ಐಡಿ ಅಥವಾ ಅಕ್ಕನಾಲೆಜ್‌ಮೆಂಟ್ ಸ್ಲಿಪ್‌ನ್ನು ಉಳಿಸಿಕೊಳ್ಳಿ.
ಅರ್ಜಿದಾರರಿಗೆ ವಿಶೇಷ ಸಲಹೆಗಳು
- ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಸರಿಯಾಗಿದೆ ಅಥವಾ ಇಲ್ಲವೆಂದು ತಿಳಿದುಕೊಳ್ಳಿ.
- ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಬಹಳ ಉತ್ತಮ.
- ನಮೂದಿಸಿದ ಮಾಹಿತಿಯಲ್ಲಿ ತಪ್ಪುಗಳಿರಬಾರದು.
- ಇಮೇಲ್ ಹಾಗೂ ಮೊಬೈಲ್ ನಂಬರ್ ಸದಾ ಸಕ್ರಿಯವಾಗಿರಬೇಕು.
- ಕೊನೆಯದಾಗಿ ಗಮನಿಸಿ ಸಬ್ಮಿಟ್ ಮಾಡುವ ಮುನ್ನ ನೀವು ಸರಿಯಾದ ದಾಖಲೆಗಳನ್ನು ಸರಿಯಾಗಿ ಮಾಹಿತಿಯನ್ನು ತುಂಬಿದ್ದೇನೆ ಅಥವಾ ಇಲ್ಲವೇ ಎಂದು ಗಮನಿಸಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇನ್ಫೋಸಿಸ್ STEM ವಿದ್ಯಾರ್ಥಿವೇತನದ ಮಹತ್ವವೇನು..?

ನಿಮಗೆಲ್ಲ ತಿಳಿದಿರುವ ಹಾಗೆ ಭಾರತದಲ್ಲಿ ಇನ್ನೂ ಅನೇಕ ವಿದ್ಯಾರ್ಥಿಗಳು ಬಹಳಷ್ಟು ಹಣಕಾಸಿನ ಕೊರತೆಯಿಂದ ಉತ್ತಮ ವಿದ್ಯಾಭ್ಯಾಸವನ್ನು ಮಾಡದಾಗಿದೆ. STEM ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರ ಅವಶ್ಯಕತೆ ಮುಂದಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ, ಇಂತಹ ವಿದ್ಯಾರ್ಥಿವೇತನ ಯೋಜನೆಗಳು ರಾಷ್ಟ್ರದ ಪ್ರಗತಿಗೆ ಸಹ ಸಹಾಯವಾಗುತ್ತವೆ ಇಷ್ಟೇ ಅಲ್ಲದೆ ಇದರಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಹ ದೊರಕುತ್ತೆ.
ಹುಡುಗಿಯರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಆಕರ್ಷಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇನ್ಫೋಸಿಸ್ ಫೌಂಡೇಶನ್‌ನಂತಹ ಸಂಸ್ಥೆಗಳ ಸಹಕಾರದಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುತ್ತಾರೆ ಹಾಗೂ ಸಾಕಷ್ಟು ಉದಾಹರಣೆಗಳಿವೆ.
ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಲಭ್ಯವಾಗುವ ದೀರ್ಘಕಾಲೀನ ಲಾಭವೇನು.?
- ಶಿಕ್ಷಣ ಮುಗಿಸುವ ಅವಕಾಶ – ಮಧ್ಯದಲ್ಲಿ ವಿದ್ಯಾಭ್ಯಾಸ ನಿಲ್ಲಿಸುವ ಅವಶ್ಯಕತೆ ಇರುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ.
- ಉದ್ಯೋಗಾವಕಾಶಗಳು – STEM ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಪಡೆದವರು ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಬಹುದು.
- ಆರ್ಥಿಕ ಸ್ವಾವಲಂಬನೆ – ವಿದ್ಯಾರ್ಥಿವೇತನದಿಂದ ಬಂದ ನೆರವಿನಿಂದ ಭವಿಷ್ಯದಲ್ಲಿ ಉತ್ತಮ ಜೀವನಮಟ್ಟ ಸಾಗಿಸಬಹುದು.
- ಸಾಮಾಜಿಕ ಬದಲಾವಣೆ – ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮುಂದಕ್ಕೆ ಬಂದು ಸಮಾಜದಲ್ಲಿ ಪ್ರೇರಣೆಯಾದಂತೆ ಮಾಡಬಹುದು.
ನಮ್ಮ ಕೊನೆಯ ಮಾತು:
ಇನ್ಫೋಸಿಸ್ STEM ವಿದ್ಯಾರ್ಥಿವೇತನ 2025 ವಿದ್ಯಾರ್ಥಿಗಳಿಗೆ ಕೇವಲ ಆರ್ಥಿಕ ನೆರವಷ್ಟೇ ಅಲ್ಲ, ಭವಿಷ್ಯದ ಹೊಸ ಅವಕಾಶಗಳ ದಾರಿ ಕೂಡಾ ಎನ್ನಬಹುದು ಹಾಗೆ ಅಂದರು ಕೂಡ ತಪ್ಪೇನಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಬಯಸುವ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗೂ ಇದು ಅಮೂಲ್ಯವಾದ ಸಹಾಯ ಅಥವಾ ಬೆನ್ನೆಲುಬು ಕೂಡ ಎನ್ನಬಹುದು ಏಕೆಂದರೆ 10,000 ಅಲ್ಲ 20,000 ಅಲ್ಲ 50000 ಅಲ್ಲ ಒಟ್ಟಾರೆಯಾಗಿ ಒಂದು ಲಕ್ಷ ರೂಪಾಯಿ ಸಿಗುತ್ತೆ.
ನೀವೇನಾದರೂ ಈ ಒಂದು ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾದರೆ ಹೇಗೆ ಅರ್ಹರ ಆಗಬೇಕೆಂದು ಈ ಮೇಲ್ಗಡೆ ತಿಳಿಸಲಾಗಿದೆ ಹಾಗೆ ಒಂದುವೇಳೆ ಇಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆಯನ್ನು ಪಡೆದುಕೊಂಡಿದ್ದಾರೆ ದಯವಿಟ್ಟು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ನೋಡಿ ಒಂದು ವರ್ಷದ ಡಿಗ್ರಿ ಇರುವುದಿಲ್ಲ ನಿಮಗೆ ಮೂರು ವರ್ಷ ಡಿಗ್ರಿ ಸ್ಟ್ರೀಮ್ ಇರುತ್ತೆ ಹೀಗೆ ನಿಮಗೆ ಒಂದು ಲಕ್ಷ ಸಿಕ್ಕರೆ ಆರಾಮಾಗಿ ನೀವು ನಿಮ್ಮ ಡಿಗ್ರಿ ಕಂಪ್ಲೀಟ್ ಮಾಡಬಹುದು ಹಾಗೆ ನಿಮ್ಮ ಕಡೆಯಿಂದ ಹಿಡೀಬಹುದು ಆರ್ಥಿಕ ಸಹಾಯ ಸಿಕ್ಕಂತಾಗುತ್ತದೆ.
ಗಮನಿಸಿ ಈ ಒಂದು ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಯೂಟ್ಯೂಬ್ ನಿಮಗೆ ಅಂತಲೇ ಇದೆ ಯೂಟ್ಯೂಬಲ್ಲಿ ಹೋಗಿ How to applu Infosys stem scholarship 2025 ಈ ತರ ನೀವೇನಾದರೂ ಸರ್ಚ್ ಮಾಡಿದರೆ ನಿಮಗೆ ಸಾವಿರಾರು ವಿಡಿಯೋ ಸರಿಯಾದನ್ನ ವಿಡಿಯೋನ ನೋಡಿ ಅಲ್ಲಿ ಹೇಗೆ ಅರ್ಜಿ ಸಲ್ಲಿಸುತ್ತಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ ಒಂದರಿಂದ ಐದು ವಿಡಿಯೋಗಳನ್ನು ನೋಡಿ ಒಂದು ಕನ್ಫರ್ಮೇಶನ್ ಬರುತ್ತೆ ನಂತರ ನೀವೇ ಖುದ್ದಾಗಿ ಇನ್ಫೋಸಿಸ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು ಯಾವುದೇ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಒಂದು ವೇಳೆ ನಮಗೆ ತಿಳಿಯುತ್ತಿಲ್ಲ ಎಂದಾದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಹತ್ತಿರ ಇರುವಂತಹ ಅರ್ಜಿ ಸಲ್ಲಿಸಬಹುದು ಏಕೆಂದರೆ ಕೆಲವೊಂದಿಷ್ಟು ಶುಲ್ಕ ಮಾತ್ರ ತೆಗೆದುಕೊಳ್ಳುತ್ತಾರೆ 100ರಿಂದ 200 ರೂಪಾಯಿ.
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಇನ್ಫೋಸಿಸ್ STEM ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಹಾಕಬಹುದು?
STEM (Science, Technology, Engineering, Mathematics) ವಿಷಯಗಳಲ್ಲಿ ಪದವಿ ಓದುತ್ತಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸ್ಬಹುದು.
2. ವಿದ್ಯಾರ್ಥಿವೇತನದ ಮೊತ್ತ ಎಷ್ಟು ಸಿಗುತ್ತದೆ?
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ, ಪುಸ್ತಕಗಳು ಮತ್ತು ಇತರೆ ಅಗತ್ಯ ವೆಚ್ಚಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಮೊತ್ತವನ್ನು ಪ್ರತಿ ವರ್ಷ ವಿಭಿನ್ನವಾಗಿ ಇರುತ್ತೆ ವಿದ್ಯಾರ್ಥಿಗಳಿಗೆ ಇದು ಗೊತ್ತಿರಬಹುದು.
3. ಹುಡುಗಿಯರಿಗೆ ವಿಶೇಷ ಆದ್ಯತೆ ಇದೆಯೆ?
ಹೌದು ಹುಡುಗಿಯರಿಗೆ ವಿಶೇಷ ಆದ್ಯತೆ ಇರುತ್ತೆ, ಈ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದೇ ಹುಡುಗಿಯರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸುವುದು ನಿಮಗೇನಾದ್ರೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತೆ.
4. ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ . ನೋಂದಣಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು.
5. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಪ್ರಾಥಮಿಕವಾಗಿ ದಾಖಲೆ ಪರಿಶೀಲನೆ ಮತ್ತು ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕೆಲವೊಮ್ಮೆ ಸಂದರ್ಶನ ಅಥವಾ ಲಿಖಿತ ಪರೀಕ್ಷೆ ನಡೆಸಲಾಗಬಹುದು.