BEML 2025 ನೇಮಕಾತಿ: Security Guard ಹಾಗೂ Fire ಸರ್ವಿಸ್ ಮ್ಯಾನ್  ಹುದ್ದೆಗಳ ನೇಮಕಾತಿ.!SSLC ಪಾಸ್ ಆದ್ರೆ ಸಾಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ಎಜುಕೇಶನ್ ಕನ್ನಡ ಡಾಟ್ ಇನ್ ಮಾಧ್ಯಮದ ಮೂಲಕ ನಿಮಗೆಲ್ಲಾ ತಿಳಿಸಲು ಹೊರಟಿರುವ ಮಾಹಿತಿ ಬಿಇಎಂಎಲ್ ಕೇವಲ ಎಸ್ ಎಲ್ ಸಿ ಪಾಸ್ ಆದವರಿಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ಫೈರ್ ಸರ್ವಿಸ್ ಮ್ಯಾನ್ ಹುದ್ದೆಗಳ ನೇಮಕಾತಿ ಮಾಡ್ತಿದೆ. 

ನೀವೇನಾದ್ರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನಿಮ್ಮ ಸಮಯವನ್ನು ವ್ಯರ್ಥ ಮಾಡಿದೆ ಇಂದಿನ ಈ ಒಂದು ಲೇಖನವನ್ನ ಕೊನೆಯ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. 

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನೀವೀಗ ಬಿಇಎಂಎಲ್ ನೇಮಕಾತಿ ಮಾಡಿಕೊಳ್ಳುತ್ತಿರುವ ಸೆಕ್ಯೂರಿಟಿ ಗಾರ್ಡ್ ಹಾಗೂ ಫೈರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ಉದಾಹರಣೆಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟಿರುತ್ತೆ..? ಹುದ್ದೆಗಳು ಖಾಲಿ ಇರುವುದು ಎಲ್ಲಿ..? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು..? ಅಧಿಕೃತ ಆದಿ ಸೂಚನೆ ಪಿಡಿಎಫ್..?

ಇಂತಹ ಪ್ರಶ್ನೆಗಳು ನಿಮ್ಮನ್ನ ಕಾಡಬಾರದೆಂದು ಆಗಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿದ್ದೇವೆ ಹೀಗಾಗಿ ಇಂದಿನ ಈ ಒಂದು ಲೇಖನವನ್ನ ನೀವು ಕೊನೆವರೆಗೆ ಓದಿ ಸಾಕು ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ ಹಾಗೆ ನೀವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

BEML ಪರಿಚಯ:

ನೋಡಿ ಸ್ನೇಹಿತರೆ ನೀವು ಮೊದಲ ಬಾರಿಗೆ BEML ಎಂಬ ಹೆಸರಿನ ಮೊದಲ ಬಾರಿಗೆ ಕೇಳುತ್ತಿದ್ದರೆ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ ಪ್ರಮುಖ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಒಂದಾಗಿರುವಂಥದ್ದು ತನ್ನ ವಿವಿಧ ಘಟಕಗಳಲ್ಲಿ ಭದ್ರತಾ ಸೇವೆಗಳನ್ನು ಬಲಪಡಿಸಲು ಹಾಗೂ ಅಗ್ನಿಶಾಮಕ ವ್ಯವಸ್ಥೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು Security Guard ಹಾಗೂ Fire Service Personnel ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಹೊರಡಿಸಿದೆ.

2025ರ ಈ ನೇಮಕಾತಿ ಅಭಿಯಾನವು ಸರ್ಕಾರಿ ನೌಕರಿಯ ಕನಸನ್ನು ನನಸು ಮಾಡಬೇಕು ಎಂಬ ಅನೇಕ ಯುವಕರಿಗೆ ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಒಳ್ಳೆಯ ಇದೊಂದು ಸುವರ್ಣ ಅವಕಾಶ ಎನ್ನಬಹುದು ಏಕೆಂದರೆ ಕೇವಲ ಹತ್ತನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಕರೆಯಲಾಗಿದೆ. 

ಈ ಲೇಖನದಲ್ಲಿ ನಾವು ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಸಾಮಾನ್ಯ ಪ್ರಶ್ನೋತ್ತರಗಳು ಕುರಿತು ವಿವರವಾಗಿ ತಿಳಿದುಕೊಳ್ಳೋಣ.

ಹುದ್ದೆಗಳ ಸಂಪೂರ್ಣ ವಿವರಗಳು:

  • ಒಟ್ಟು ಹುದ್ದೆಗಳು: 56
  • ಹುದ್ದೆಗಳ ಹಂಚಿಕೆ:
    • Security Guard – 44 ಹುದ್ದೆಗಳು
    • Fire Service Personnel – 12 ಹುದ್ದೆಗಳು

ಸರಿಯಾಗಿ ಗಮನಿಸಿ ಈ ಹುದ್ದೆಗಳು ಮುಖ್ಯವಾಗಿ ಕರ್ನಾಟಕ ಮತ್ತು ಸಮೀಪದ ಘಟಕಗಳಲ್ಲಿ ಭರ್ತಿ ಆಗಲಿದ್ದು, ಅಗತ್ಯದ ಪ್ರಕಾರ ಇತರ ಘಟಕಗಳಲ್ಲಿಯೂ ನಿಯೋಜನೆ ಸಾಧ್ಯ ಆಗಿರುತ್ತೆ ಹೀಗಾಗಿ ನಿಮಗಂತಲೇ ನಾವು ಈ ಕೆಳಗಡೆ ಅಧಿಕೃತ ಆದಿ ಸೂಚನೆ ಪಿಡಿಎಫ್ ಅಂದರೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಲೇಖನವನ್ನ ಕೊನೆವರ್ಗು ಓದಿ ಅಥವಾ ಸ್ಕ್ರೋಲ್ ಮಾಡಿ ನೋಟಿಫಿಕೇಶನ್ ಲಿಂಕ್ ಅಧಿಕೃತ ವೆಬ್ ಸೈಟ್ ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿಕೊಂಡು ಓದಬಹುದು ಹೆಚ್ಚಿನ ಮಾಹಿತಿಗಾಗಿ. 

ವೇತನ ಶ್ರೇಣಿ ಎಷ್ಟಿರುತ್ತೆ:

BEML ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆಕರ್ಷಕ ವೇತನದ ಜೊತೆಗೆ ಒಂದು ಒಳ್ಳೆ ಭದ್ರವಾದ ಭವಿಷ್ಯ ಕೂಡ ಸಿಗುತ್ತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಗಮನಿಸಿ. 

ಮೂಲ ವೇತನ ಶ್ರೇಣಿ: ₹16,900 – ₹60,650

  • ಪ್ರಾರಂಭಿಕ ಹಂತದಲ್ಲಿ ಒಪ್ಪಂದ (Contract) ಆಧಾರದ ಮೇಲೆ ನೇಮಕಾತಿ ನಡೆಯುವ ಸಾಧ್ಯತೆ ಇರುತ್ತದೆ ಇದಾದ ನಂತರ ನಿಗದಿತ ನಿಯಮಾವಳಿಗಳ ಪ್ರಕಾರ ಶಾಶ್ವತ ಹುದ್ದೆಗೆ ಉತ್ತೀರ್ಣಗೊಳ್ಳುವ ಅವಕಾಶ ಇರುತ್ತದೆ.
  • ವೇತನದ ಜೊತೆಗೆ ಇತರ ಭತ್ಯೆಗಳು, ಆರೋಗ್ಯ ಸೌಲಭ್ಯ, ನಿವೃತ್ತಿ ನಿಧಿ ಹಾಗೂ ಸರ್ಕಾರದ ಸಾರ್ವಜನಿಕ ವಲಯದ ಎಲ್ಲಾ ಅನುಕೂಲಗಳೂ ದೊರೆಯುತ್ತವೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ ಹೀಗಾಗಿ ನಿಮಗೆ ಒಂದು ಒಳ್ಳೆ ಭವಿಷ್ಯ ಸಿಗುತ್ತೆ ಎಂದು ಹೇಳಬಹುದು ಆಯ್ಕೆಯಾದರೆ ಮಾತ್ರ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಕುರಿತು ಮಾಹಿತಿ:

ಶೈಕ್ಷಣಿಕ ಅರ್ಹತೆ

  • ಕನಿಷ್ಠ SSLC / 10ನೇ ತರಗತಿ ಪಾಸ್ ಆಗಿರಬೇಕು.

ಅನುಭವ

  • Security Guard ಹುದ್ದೆಗೆ:
    • ಕನಿಷ್ಠ 2 ವರ್ಷಗಳ ಅನುಭವ ಸೇನೆ/ಕೇಂದ್ರ ಅಥವಾ ರಾಜ್ಯ ಪೊಲೀಸ್/ಪ್ಯಾರಾಮಿಲಿಟರಿ ಪಡೆಯಲ್ಲಿರಬೇಕು.
    • ಅಥವಾ ಮಾನ್ಯತೆ ಪಡೆದ ಭದ್ರತಾ ಸಂಸ್ಥೆಯಲ್ಲಿ (Security Agency) ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
  • Fire Service Personnel ಹುದ್ದೆಗೆ ಮಾಹಿತಿ:
    • ಅಗ್ನಿಶಾಮಕ ಇಲಾಖೆಯಲ್ಲಿ ಅಥವಾ ಸೇನೆ/ಪ್ಯಾರಾಮಿಲಿಟರಿ/ಪೊಲೀಸ್ ಪಡೆಗಳಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕಾಗುತ್ತದೆ.
    • ಅಗ್ನಿ ನಂದಿಸುವಂತಹ ತರಬೇತಿ ಹಾಗೂ ಪ್ರಾಯೋಗಿಕ ಅನುಭವ ಹೊಂದಿರುವವರಿಗೆ ಅಗತ್ಯತೆ ಇರಬೇಕಾಗುತ್ತೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು:

  • ಗರಿಷ್ಠ ವಯಸ್ಸು: 29 ವರ್ಷಗಳು
  • ಮೀಸಲಾತಿ ಪ್ರಕಾರ ವಯೋ ವಿನಾಯತಿ:
    • SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ
    • OBC ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ
    • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ

ಆಯ್ಕೆ ಪ್ರಕ್ರಿಯೆ ಹೇಗೆ:

BEML ಸಂಸ್ಥೆಯು ಶಿಸ್ತಿನ ಹಾಗೂ ದೈಹಿಕ ಸಾಮರ್ಥ್ಯದ ಹುದ್ದೆಗಳಿಗಾಗಿ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಗಮನಿಸಿ.

  1. ಮೌಲ್ಯಮಾಪನ ಪರೀಕ್ಷೆ – ಸಾಮಾನ್ಯ ಜ್ಞಾನ, ಪ್ರಾಥಮಿಕ ಲಿಖಿತ ಪರೀಕ್ಷೆ ಮುಂತಾದವು.
  2. ದೈಹಿಕ ಪರೀಕ್ಷೆ (Physical Test) ಶಾರೀರಿಕ ಸಾಮರ್ಥ್ಯ, ವೇಗ, ಶಕ್ತಿ, ಚುರುಕಿನ ಮೇಲೆ ಪರೀಕ್ಷೆ ಜೊತೆ ಇಲ್ಲಿ ಅಭ್ಯರ್ಥಿಗಳು ಮೊದಲು ಮೌಲ್ಯಮಾಪನ ಪರೀಕ್ಷೆಗೆ ಅರ್ಹರಾಗಿ ಪಾಸ್ ಹಾಗಿದ್ದರೆ ಮಾತ್ರ ದೈಹಿಕ ಪರೀಕ್ಷೆಗೆ ಅರ್ಹಾಗಿರುತ್ತಾರೆ.
  3. ದಾಖಲೆ ಪರಿಶೀಲನೆ – ಅರ್ಹತಾ ದಾಖಲೆಗಳು, ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ.
  4. ವೈದ್ಯಕೀಯ ಪರೀಕ್ಷೆ – ಆರೋಗ್ಯ ಹಾಗೂ ಶಾರೀರಿಕ ಸಾಮರ್ಥ್ಯದ ತಪಾಸಣೆ.

ಈ ಮೇಲ್ಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ:

  1. BEML ಅಧಿಕೃತ ವೆಬ್‌ಸೈಟ್ (bemlindia.in) ಗೆ ಭೇಟಿ ನೀಡಿ.
  2. “Careers / Recruitment” ವಿಭಾಗವನ್ನು ತೆರೆಯಿರಿ.
  3. “Security Guard & Fire Service Personnel Recruitment 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಆನ್‌ಲೈನ್ ಅರ್ಜಿ ಫಾರ್ಮ್ ಸರಿಯಾಗಿ ತುಂಬಿ.
  5. ಅಗತ್ಯ ದಾಖಲೆಗಳು (ಫೋಟೋ, ಸಹಿ, ಶೈಕ್ಷಣಿಕ ದಾಖಲೆ, ಅನುಭವ ಪ್ರಮಾಣ ಪತ್ರ) ಅಪ್‌ಲೋಡ್ ಮಾಡಿ.
  6. ಅರ್ಜಿ ಶುಲ್ಕ ಪಾವತಿಸಿ.
  7. ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್‌ಔಟ್ ತೆಗೆದುಕೊಂಡು ಸುರಕ್ಷಿತವಾಗಿರಿಸಿ ಇದು ಬಹಳ ಮುಖ್ಯವಾಗಿರುತ್ತೆ.

ಅರ್ಜಿ ಶುಲ್ಕ ಎಷ್ಟಿರುತ್ತೆ:

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹200
  • SC/ST/PwD/Ex-Servicemen ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಈ ಮೇಲ್ಗಡೆ ಅರ್ಜಿ ಶುಲ್ಕದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ನೋಡಿ ನಿಮಗೆ ಇನ್ನೂ ಅರ್ಜಿ ಶುಲ್ಕದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನಿಮಗಾಗಿ ನಾವು ಈ ಕೆಳಗಡೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ಗಮನಿಸಿ.

ಹುದ್ದೆಯ ಮಹತ್ವ ಮತ್ತು ಭವಿಷ್ಯದ ವಿವರಣೆಗಳು:

BEML ಸಂಸ್ಥೆಯಲ್ಲಿ Security Guard ಮತ್ತು Fire Service Personnel  ಸೇವೆ ಸಲ್ಲಿಸುವುದು ಕೇವಲ ಇದೊಂದು ಉದ್ಯೋಗವಲ್ಲ ಏಕೆಂದರೆ ಇದೊಂದು ರಾಷ್ಟ್ರಸೇವೆಯ ಒಂದು ಭಾಗವಾಗಿದೆ ಎಂದು ಹೇಳಬಹುದು.

  • Security Guard ಹುದ್ದೆಯಲ್ಲಿ ಕಂಪನಿಯ ಆಸ್ತಿಪಾಸ್ತಿ ಹಾಗೂ ಸಿಬ್ಬಂದಿಯ ಭದ್ರತೆ ನೋಡಿಕೊಳ್ಳುವ ಹೊಣೆಗಾರಿಕೆ ಇರುತ್ತದೆ.
  • Fire Service Personnel ಹುದ್ದೆಯಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟುವುದು, ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವುದು ಹಾಗೂ ಅಗ್ನಿ ನಂದಿಸುವ ಪ್ರಮುಖ ಕರ್ತವ್ಯ ಇರುತ್ತದೆ.

ಈ ಹುದ್ದೆಗಳು ಕೇವಲ ಉದ್ಯೋಗವಲ್ಲದೆ, ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಬಹುದು.

ಪರೀಕ್ಷೆಗೆ ತಯಾರಿ ಸಲಹೆಗಳು:

  • ದೈಹಿಕ ವ್ಯಾಯಾಮ: ಪ್ರತಿದಿನ ಓಟ, ಕಸರತ್ತು, ಶಕ್ತಿ ಅಭ್ಯಾಸ ಮಾಡಬೇಕಾಗುತ್ತೆ.
  • ಮೂಲಭೂತ ಸಾಮಾನ್ಯ ಜ್ಞಾನ: ಪ್ರಚಲಿತ ಘಟನೆಗಳು, ಭದ್ರತಾ ನಿಯಮಗಳು, ಅಗ್ನಿಶಾಮಕ ತಂತ್ರಗಳ ಬಗ್ಗೆ ಅಧ್ಯಯನ ತಪ್ಪದೇ ಮಾಡಿ ಇವು ಮುಖ್ಯವಾಗಿರುತ್ತೆ.
  •  ದಾಖಲೆಗಳು: ಸೇನೆ/ಪೊಲೀಸ್/ಅಗ್ನಿಶಾಮಕ ಸೇವೆಯಲ್ಲಿನ ಅನುಭವವನ್ನು ಸರಿಯಾಗಿ ದಾಖಲಿಸಿ.
  • ಅರ್ಜಿ : ಅರ್ಜಿ ಸಲ್ಲಿಸುವಾಗ ತಪ್ಪುಗಳಾಗದಂತೆ ವಿಶೇಷ ಗಮನ ಕೊಡಿ ಏಕೆಂದರೆ ಇದೇ ಬಹಳ ಮುಖ್ಯವಾಗಿರುತ್ತೆ ಯಾವುದೇ ತಪ್ಪು ಮಾಡದೆ ಸರಿಯಾಗಿ ಅರ್ಜಿ ಫಾರಂ ತುಂಬಿ ಅರ್ಜಿ ಸಲ್ಲಿಸಿ.

 BEML ಸೇರುವುದರಿಂದ ಆಗುವ ಲಾಭ?

  • ಸರ್ಕಾರಿ ವಲಯದ ಸ್ಥಿರ ಉದ್ಯೋಗ ಪರಮನೆಂಟ್ ಉದ್ಯೋಗ ಸಿಗುತ್ತೆ ಎಂದು ಹೇಳಬಹುದು.
  • ಉತ್ತಮ ವೇತನ ಹಾಗೂ ಭತ್ಯೆಗಳು.
  • ಆರೋಗ್ಯ ವಿಮೆ ಮತ್ತು ನಿವೃತ್ತಿ ಸೌಲಭ್ಯಗಳು.
  • ನೀವು ಅಭಿವೃದ್ಧಿ ಹೊಂದುತ್ತೀರಿ ಹಾಗೂ ವಿವಿಧ ಅವಕಾಶಗಳು ಸಿಗುತ್ತೆ..
  • ರಾಷ್ಟ್ರಸೇವೆಯಲ್ಲಿ ಭಾಗವಹಿಸುವ ಗೌರವ ಮತ್ತು ಹೊಣೆಗಾರಿಕೆ ಇನ್ನು ಮುಂತಾದ ಸೇವೆಯಲ್ಲಿ ನೀವು ತೊಡಕಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 20 ಆಗಸ್ಟ್ 2025
  • ಅಂತಿಮ ದಿನಾಂಕ: 12 ಸೆಪ್ಟೆಂಬರ್ 2025 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್: Click here 

ಅಧಿಕೃತ ನೋಟಿಫಿಕೇಶನ್ pdf ಲಿಂಕ್:Click here

ಆನ್ಲೈನ್ ಅರ್ಜಿ: click here 

ನಮ್ಮ ಕೊನೆ ಮಾತು:

BEML 2025 ನೇಮಕಾತಿ ಪ್ರಕ್ರಿಯೆಯು ಸರ್ಕಾರಿ ಉದ್ಯೋಗದ ಕನಸನ್ನು ಸಾಕಾರಗೊಳಿಸಿಕೊಳ್ಳಲು ಇದೊಂದು ಒಳ್ಳೆಯ ಸುವರ್ಣ ಅವಕಾಶವಾಗಿದೆ ಎಂದು ಹೇಳಬಹುದು ಏಕೆಂದರೆ ಕೇವಲ ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. Security Guard ಹಾಗೂ Fire Service Personnel ಹುದ್ದೆಗಳು ಕೇವಲ ಜೀವನೋಪಾಯವಲ್ಲದೆ, ಸಮಾಜ ಹಾಗೂ ರಾಷ್ಟ್ರದ ಸುರಕ್ಷತೆಯ ಹೊಣೆಗಾರಿಕೆಯ ಹುದ್ದೆಗಳಾಗಿವೆ. 

ಇಂದಿನ ಈ ಒಂದು ಉದ್ಯೋಗದ ಮಾಹಿತಿ ನಿಮಗೆಲ್ಲ ಸಹಾಯವಾಗುತ್ತೆ ಅಂತ ಅಂದುಕೊಳ್ಳುತ್ತಾ ಇಂದಿನ ಈ ಒಂದು ಲೇಖನ ಅಂತ್ಯಗೊಳ್ಳುತ್ತೆ ನಿನಗೆ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ಕಮೆಂಟ್ ಮಾಡಿ ನಾವು ನಿಮಗಾಗಿ ಇದ್ದೇವೆ. 

FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)

1. ಅರ್ಜಿಯ ಕೊನೆಯ ದಿನ ಯಾವುದು?
→ ಅಧಿಕೃತ ಪ್ರಕಟಣೆಯ ಪ್ರಕಾರ 12 ಸೆಪ್ಟೆಂಬರ್ 2025 ಕೊನೆ ದಿನಾಂಕ. ನೀವೆಲ್ಲರೂ ಒಂದು ಬಾರಿ ನೋಟಿಫಿಕೇಶನ್ ಚೆಕ್ ಮಾಡಿ ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ.

2. ಅರ್ಹತೆಗೆ ಬೇಕಾದ ಕನಿಷ್ಠ ವಿದ್ಯಾರ್ಹತೆ ಯಾವುದು?
→ ಕನಿಷ್ಠ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು.

3. ಹುದ್ದೆಗೆ ಅನುಭವ ಕಡ್ಡಾಯವೇ?
→ ಹೌದು. ಸೇನೆ/ಪೊಲೀಸ್/ಪ್ಯಾರಾಮಿಲಿಟರಿ/ಅಗ್ನಿಶಾಮಕ ಸೇವೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಅಗತ್ಯ. ನಿಮಗೆ ಡೌಟ್ ಬಂದಾದರೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಮೇಲ್ಗಡೆ ಕೊಡಲಾಗಿದೆ.

4. ವೇತನ ಎಷ್ಟು ಸಿಗುತ್ತದೆ?
→ ₹16,900 ರಿಂದ ₹60,650ರವರೆಗೆ, ಜೊತೆಗೆ ಇನ್ನಿತರೆ ಭತ್ಯೆಗಳು ದೊರೆಯುತ್ತವೆ.

5. ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಹಂತಗಳು ಇರುತ್ತವೆ?
→ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇಷ್ಟೆಲ್ಲ ನೀವು ಸರಿಯಾಗಿ ಮಾಡಿದ್ರೆ ಮಾತ್ರ ಮುಂದಿನ ಹಂತಕ್ಕೆ ನೀವು ಆಯ್ಕೆಯಾಗಬಹುದು. ಇಲ್ಲಿ ನೋಡಿ ನೀವು ಮೊದಲು ಲಿಖಿತ ಪರೀಕ್ಷೆಗೆ ಆಯ್ಕೆಯಾದರೆ ಮಾತ್ರ ಮುಂದಿನ ಪರೀಕ್ಷೆಗೆ ಆಯ್ಕೆಯಾಗುತ್ತಿರಿ. ಹೀಗಾಗಿ ದೈಹಿಕ ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗೆ ಲಿಖಿತ ಪರೀಕ್ಷೆಯನ್ನು ಬಿಟ್ಟು ನೀವು ಸರಿಯಾಗಿ ಕ್ರಮ ತೆಗೆದುಕೊಂಡರೆ ಉಪಯೋಗವಿಲ್ಲ ಹೀಗಾಗಿ ಮೊದಲು  ಲಿಖಿತ ಪರೀಕ್ಷೆ ಸಜ್ಜಾಗಿ ಸರಿಯಾಗಿ ಓದಿ ಹಾಗೆ ದೈಹಿಕ ಪರೀಕ್ಷೆ ದಾಖಲೆ ಪರಿಶೀಲಿಗಳನ್ನು ಇವೆಲ್ಲವೂ ಇರುತ್ತೆ ಲಿಖಿತ ಪರೀಕ್ಷೆ ನಂತರ ಆಯ್ಕೆ ಆದರೆ ಮಾತ್ರ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!