ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು ಫೈರ್ ಮ್ಯಾನ್ ಮತ್ತು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ (ISRO) ನಮ್ಮ ದೇಶದ ಬಹುದೊಡ್ಡ ಹೆಮ್ಮೆ. ಇದರ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC), ತಿರುವನಂತಪುರಂ (ಕೇರಳ) ದಲ್ಲಿದೆ, ಇಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇದೆ, ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ, ಇದು ನಮ್ಮ ದೇಶದ ಪ್ರಮುಖ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಶಾಶ್ವತ ಸರ್ಕಾರಿ ಉದ್ಯೋಗ ಪಡೆಯುವುದು ಸಾವಿರಾರು ಯುವಕರ ಕನಸು ಆಗಿರುತ್ತೆ ಹೀಗಾಗಿ ಇಂದಿನ ಯುವದ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ.
2025ರಲ್ಲಿ ಪ್ರಕಟವಾಗಿರುವ ISRO VSSC ನೇಮಕಾತಿ ಅಧಿಸೂಚನೆ ಫೈರ್‌ಮನ್ ಮತ್ತು ಕುಕ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಹಾಕುವ ನಿರೀಕ್ಷೆಯಿದೆ. ಈ ಲೇಖನದಲ್ಲಿ ನೀವು ಅರ್ಜಿ ಸಲ್ಲಿಸುವ ವಿಧಾನದಿಂದ ಹಿಡಿದು ವಿದ್ಯಾರ್ಹತೆ, ವಯೋಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ, ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳವರೆಗೆ 2000+ ಪದಗಳ ಸಂಪೂರ್ಣ ಮಾರ್ಗದರ್ಶಿ ಪಡೆಯುತ್ತೀರಿ.
ನೇಮಕಾತಿಯ ಉದ್ದೇಶ ಮತ್ತು ಸಂಪೂರ್ಣ ಮಾಹಿತಿ:
Table of Contents
ನೋಡಿ ಪ್ರಸ್ತುತವಾಗಿ ಇಸ್ರೋ ನಲ್ಲಿ ಹುದ್ದೆಗಳು ಖಾಲಿ ಇದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಒದಗಿಸಲಾಗಿದೆ ಹಾಗೆ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಬಹುದು ಅದರಲ್ಲಿದೆ ಸಂಪೂರ್ಣ ಮಾಹಿತಿ.
- ಉದ್ಯೋಗದಲ್ಲಿ ಸ್ಥಿರತೆ ದೊರೆದಂತಾಗುತ್ತದೆ.
- ಉತ್ತಮ ವೇತನ ಹಾಗೂ ಸೌಲಭ್ಯಗಳು ಲಭ್ಯವಿರುತ್ತೆ.
- ದೇಶದ ಬಾಹ್ಯಾಕಾಶ ಸಂಶೋಧನೆಗೆ ಕೊಡುಗೆ ನೀಡುವ ಹೆಮ್ಮೆ ಆಗಿರುತ್ತೆ.
- ಉದಾಹರಣೆಗೆ ನೀವೆಲ್ಲ ತಿಳಿದೇ ಇರಬಹುದು, ಚಂದ್ರಯಾನ.
ಪ್ರಸ್ತುತವಾಗಿ ಫೈರ್‌ಮನ್ ಹುದ್ದೆಯಲ್ಲಿ ಕೆಲಸ ಮಾಡುವವರು ISRO ಕೇಂದ್ರದ ಸುರಕ್ಷತೆಗೆ ಮುಖ್ಯವಾಗಿರುತ್ತಾರೆ.
ಕುಕ್ ಹುದ್ದೆಯಲ್ಲಿ ಕೆಲಸ ಮಾಡುವವರು ನೂರಾರು ವಿಜ್ಞಾನಿಗಳು, ತಾಂತ್ರಿಕರು ಹಾಗೂ ಸಿಬ್ಬಂದಿಗಳಿಗೆ ಆಹಾರ ಸೇವೆಯನ್ನು ತಯಾರು ಮಾಡುತ್ತಾರೆ. ಎರಡೂ ಹುದ್ದೆಗಳು ಸಂಸ್ಥೆಯ ದಿನನಿತ್ಯದ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಹುದ್ದೆಗಳ ವಿವರಣೆ:
ಪ್ರಮುಖವಾಗಿ ಈ ಒಂದು ಅಧಿಸೂಚನೆಯಲ್ಲಿ ಇರುವಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಒದಗಿಸಲಾಗಿದೆ ಫೈರ್ಮನ್ ಮತ್ತು ಕುಕ್ ಹುದ್ದೆ ಗೋಸ್ಕರ:

ಫೈರ್‌ಮನ್ (Fireman)
- ತುರ್ತು ಪರಿಸ್ಥಿತಿಗಳಲ್ಲಿ ಅಗ್ನಿಶಾಮಕ ಕಾರ್ಯ.
- ಸಿಬ್ಬಂದಿ ಸುರಕ್ಷತೆಯನ್ನು ಕಾಪಾಡುವುದು.
- ಅಗ್ನಿಶಾಮಕ ಸಾಧನಗಳನ್ನು ನಿರ್ವಹಿಸುವುದು.
- ಆಪತ್ತು ಸಂದರ್ಭಗಳಲ್ಲಿ ತಕ್ಷಣದ ಕ್ರಮ ಕೈಗೊಳ್ಳುವುದು.
ಕುಕ್ (Cook)
- ಸಿಬ್ಬಂದಿ ಮತ್ತು ವಿಜ್ಞಾನಿಗಳಿಗೆ ದಿನನಿತ್ಯದ ಆಹಾರ ತಯಾರಿ.
- ಪೌಷ್ಠಿಕ, ಸ್ವಚ್ಚ ಹಾಗೂ ಗುಣಮಟ್ಟದ ಆಹಾರ ತಯಾರಿಸುವುದು.
- ಅಡುಗೆಮನೆ ವ್ಯವಸ್ಥೆಯನ್ನು ನಿರ್ವಹಿಸುವುದು.
- ಆರೋಗ್ಯದ ದೃಷ್ಟಿಯಿಂದ ಹೈಜೀನ್ ಪಾಲಿಸುವುದಾಗಿದೆ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..?
ಈ ಕೆಳಗಡೆ ಫೈರ್ಮನ್ ಮತ್ತು ಕುಕ್ಕುದಿಗಳಿಗೆ ಸಂಬಂಧಪಟ್ಟಂತೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು ಹಾಗೆ ನಿಮಗೆ ಇನ್ನೊಂದು ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ ಕೆಳಗಡೆ ಲಿಂಕ್ ಒದಗಿಸಲಾಗಿದೆ.
- ಒಟ್ಟು ಹುದ್ದೆಗಳು: 20+
- ಫೈರ್‌ಮನ್: 10+
- ಕುಕ್: 8+
- ನೋಡಿ ನೀವು ಹುದ್ದೆಗಳ ಕುರಿತು ಅಧಿಕೃತ ಮಾಹಿತಿ ತಿಳಿದುಕೊಳ್ಳುವುದಾದರೆ ಹಾಗೆ ಅರ್ಜಿ ಸಲ್ಲಿಸಲು ಮುಂದಾದರೆ ನಾವು ಈ ಕೆಳಗಡೆ ನಿಮಗಾಗಿ ನಾವು ಅರ್ಜಿ ಸಲ್ಲಿಸುವ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ಲೋಡ್ ಆಗುತ್ತೆ ಸಂಪೂರ್ಣ ಮಾಹಿತಿ ಓದಬಹುದು.
ಸ್ಪರ್ಧಾತ್ಮಕ ಹುದ್ದೆಗಳ ವಿವರ:
- ಫೈರ್‌ಮನ್ ಹುದ್ದೆಗೆ ಹೆಚ್ಚು ಅರ್ಜಿಗಳು ಬರುತ್ತವೆ. ಕಾರಣ: ವಿದ್ಯಾರ್ಹತೆ ಕೇವಲ SSLC ಪಾಸ್ ಆದ್ರೆ ಸಾಕಾಗಿರುತ್ತೆ ಹೀಗಾಗಿ ನೀವೆಲ್ಲರೂ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕಾಗುತ್ತದೆ ಹಾಗೆ ನಿಮ್ಮ ದೈಹಿಕ ಪರೀಕ್ಷೆಯನ್ನು ಸರಿಯಾಗಿ ಇಟ್ಟುಕೊಳ್ಳಿ.
- ಕುಕ್ ಹುದ್ದೆಗೆ ಅಡುಗೆ ಅನುಭವ ಇರುವವರಿಗೆ ಹೆಚ್ಚು ಅವಕಾಶ. ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ತರಬೇತಿ ಪಡೆದವರು ಸುಲಭವಾಗಿ ಆಯ್ಕೆ ಆಗಬಹುದು ಏಕೆಂದರೆ ಈ ಮೊದಲೇ ನಿಮಗೆ ಅನುಭವ ಇರುತ್ತೆ.
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ:
ISRO VSSC ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಮೂಲಕ ಇರುತ್ತೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಈ ಕೆಳಗಡೆ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ಸ್ ಒದಗಿಸಿದ್ದೇವೆ ಹಾಗೆ ಅಪ್ಲೈ ಲಿಂಕ್ ಕೂಡ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಹಾಗೆ ಗಮನಿಸಿ ಒಂದು ವೇಳೆ ಅರ್ಜಿ ಸಲ್ಲಿಸಲು ನಿಮಗೆ ಯಾವುದೇ ತರಹದ ಪ್ರಶ್ನೆಗಳು ಇದ್ದಲ್ಲಿ ನಾವಿದ್ದೇವೆ ನಿಮಗಂತಲೇ ಕಮೆಂಟ್ ಮಾಡಿ ಅಥವಾ ಯೂಟ್ಯೂಬ್ ನಿಮಗೆ ಅಂತಲೇ ಇದೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ನೋಡಬಹುದು. ಇಷ್ಟೆಲ್ಲ ಬೇಡಪ್ಪ ಅಂದರೆ ಹತ್ತಿರದಲ್ಲಿರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಿ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ನೋಡಿ ಇಂತಹ ಹುದ್ದೆಗಳು ಬಹಳ ಕಡಿಮೆ ಇರುತ್ತೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತೆ.
ಅರ್ಜಿ ಪ್ರಮುಖ ಹಂತಗಳು ಈ ಕೆಳಗಿನಂತಿದೆ ಗಮನಿಸಿ:
- ಅಧಿಕೃತ ವೆಬ್‌ಸೈಟ್ ತೆರೆಯಿರಿ.
- “Career/Recruitment” ವಿಭಾಗ ಕ್ಲಿಕ್ ಮಾಡಿ.
- ಫೈರ್‌ಮನ್ ಅಥವಾ ಕುಕ್ ಹುದ್ದೆ ಆಯ್ಕೆಮಾಡಿ.
- ಮೂಲ ಮಾಹಿತಿಗಳನ್ನು ನಮೂದಿಸಿ (ಹೆಸರು, ವಿಳಾಸ, ಜನ್ಮದಿನಾಂಕ, ವಿದ್ಯಾರ್ಹತೆ).
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ (scanned copy)
- ವಿದ್ಯಾರ್ಹತಾ ಪ್ರಮಾಣ ಪತ್ರಗಳು
- ಗುರುತಿನ ಚೀಟಿ (ಆಧಾರ್/ಪ್ಯಾನ್/ವೋಟರ್ ಐಡಿ)
- ಅರ್ಜಿ ಶುಲ್ಕ ಪಾವತಿಸಿ.
- ಅಂತಿಮವಾಗಿ “Submit” ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ದಯವಿಟ್ಟು ಈ ತಪ್ಪುಗಳನ್ನು ಮಾಡಬೇಡಿ:

- ಮೊಬೈಲ್ ಬದಲು ಕಂಪ್ಯೂಟರ್‌ನಲ್ಲಿ ಅರ್ಜಿ ತುಂಬುವುದು ಉತ್ತಮ ಎಂದು ಭಾವಿಸಿ ಮೊದಲ ಬಾರಿಗೆ ಕಂಪ್ಯೂಟರ್ ಮೂಲಕ ಅರ್ಜಿ ಸಚಿನ್ ಮುಂದಾದರೆ ಬಹಳ ರೀತಿಯ ಪ್ರಾಬ್ಲಂ ಬರುತ್ತೆ ನಿಮಗೆ ಮೊಬೈಲ್ ಮೂಲಕವೇ ಸರಿಯಾಗಿ ಬಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಏಕೆಂದರೆ ಸ್ವಲ್ಪ ಮಿಸ್ಟೇಕ್ ಆಗಿ ಯಾವುದೇ ಡಾಕುಮೆಂಟ್ ನೀಡದೆ ಹಾಗೆ ಸಬ್ಮಿಟ್ ಮಾಡಿದರೆ ಕೆಲವೊಂದು ಡಾಕುಮೆಂಟ್ ಗಳು ಸರಿಯಾಗಿ ಅಪ್ಲೋಡ್ ಆಗದೆ ಸಬ್ಮಿಟ್ ಆದರೆ ನೀವು ಮಾಡುವ ದೊಡ್ಡ ತಪ್ಪು ಹೀಗಾಗಿ ನೋಡಿ ಮುಖ್ಯವಾಗಿ ಹೇಳುವುದು ಏನೆಂದರೆ ಇಲ್ಲಿ ಪ್ರಮುಖವಾಗಿ ನಿಮಗೆ ಯಾವುದೇ ಪರೀಕ್ಷೆ ಇಲ್ಲದೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದೇ ಒಂದು ಮುಖ್ಯ ಅಂತ ಹೇಳಬಹುದು.
- ಹೆಸರು ಮತ್ತು ಜನ್ಮದಿನಾಂಕವು SSLC ಮಕಸ್ ಗಾಡ್ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಬೇಕು ಹಾಗೆ ಫೋಟೋ ಮತ್ತು ಸಹಿ ಸ್ಪಷ್ಟವಾಗಿರಬೇಕು.
ಉದ್ಯೋಗ ಸ್ಥಳ ಎಲ್ಲಿ..?
ಈ ನೇಮಕಾತಿಯ ಉದ್ಯೋಗ ಸ್ಥಳ ಕೇರಳದ ತಿರುವನಂತಪುರಂ ನಲ್ಲಿ .
ಒಂದು ವೇಳೆ ನೀವೇನಾದರೂ ಈ ಹುದ್ದೆಗಳಿಗೆ ಆಯ್ಕೆಯಾದರೆ ಅಲ್ಲಿಯೇ ಕಾರ್ಯನಿರ್ವಹಿಸಬೇಕು. ಆದರೆ ISRO ನ ಇತರೆ ಘಟಕಗಳಲ್ಲಿ ಕೆಲಸ ಮಾಡುವ ಅವಕಾಶವೂ ಸಿಗಬಹುದು ಅಥವಾ ಸಿಗದೇ ಇರಬಹುದು.
- ಆಗುವ ಸುಲಭ ಮಾರ್ಗ: ಸಮುದ್ರತೀರದ ನಗರ, ಉತ್ತಮ ವಸತಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ದೊರೆಯುತ್ತವೆ.
- ವರ್ಗಾವಣೆ (Transfer): ಸೇವಾ ಅವಧಿಯಲ್ಲಿ ಭಾರತದಲ್ಲಿನ ಇತರೆ ISRO ಕೇಂದ್ರಗಳಿಗೆ ವರ್ಗಾವಣೆ ಮಾಡಬಹುದು.
ಸಂಬಳ ಹಾಗೂ ಸೌಲಭ್ಯದ ವಿವರಣೆ:
ISRO VSSC ತನ್ನ ಸಿಬ್ಬಂದಿಗೆ 7ನೇ ವೇತನ ಆಯೋಗದಂತೆ ವೇತನ ನೀಡುತ್ತದೆ ಈ ಒಂದು ವೇತನದ ಕುರಿತು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
- ಫೈರ್‌ಮನ್: ₹19,900 – ₹63,200 (Level 2)
- ಕುಕ್: ₹19,900 – ₹63,200 (Level 2)
ಇದರ ಜೊತೆಗೆ ಈ ಕೆಳಗಿನವುಗಳನ್ನು ನೀಡುತ್ತಾರೆ.
- ಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ಪ್ರಯಾಣ ಭತ್ಯೆ (TA)
- ಆರೋಗ್ಯ ವಿಮೆ
- ಪಿಂಚಣಿ ಸೌಲಭ್ಯ
- ಇನ್ನು ಮುಂತಾದವುಗಳು
ಭವಿಷ್ಯದಲ್ಲಿ ಪ್ರಮೋಷನ್ ಇರುತ್ತಾ..?
ಅನುಭವ ಹೆಚ್ಚಾದಂತೆ ಬಡ್ತಿ (Promotion) ದೊರೆಯುತ್ತದೆ. ಉದಾಹರಣೆ ಮೂಲಕ ತಿಳಿಸುವುದಾದರೆ: ಫೈರ್‌ಮನ್ → ಸೀನಿಯರ್ ಫೈರ್‌ಮನ್ → ಫೈರ್ ಆಫೀಸರ್.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 25 ವರ್ಷ
- ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ:
- OBC – 3 ವರ್ಷ
- SC/ST – 5 ವರ್ಷ
- PwD – 10 ವರ್ಷ
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: 24-09-2025
- ಅರ್ಜಿ ಕೊನೆ: 08-10-2025
- ಪರೀಕ್ಷೆ/ಟ್ರೇಡ್ ಟೆಸ್ಟ್: ನೋಟಿಫಿಕೇಶನ್ ಚೆಕ್ ಮಾಡಿ
- ಫಲಿತಾಂಶ: ನೋಟಿಫಿಕೇಶನ್ ಚೆಕ್ ಮಾಡಿ
ವಿದ್ಯಾರ್ಹತೆ ಮತ್ತು ಅನುಭವ ಏನೇನ್ ಇರಬೇಕು..?

ಫೈರ್‌ಮನ್ ಹುದ್ದೆಗಳಿಗೋಸ್ಕರ:
- SSLC/10ನೇ ತರಗತಿ ಪಾಸು.
- ಅಗ್ನಿಶಾಮಕ ತರಬೇತಿ ಇದ್ದರೆ ಹೆಚ್ಚು ಆದ್ಯತೆ.
- ದೈಹಿಕ ಸಾಮರ್ಥ್ಯ ಪರೀಕ್ಷೆ ಪಾಸ್ ಮಾಡಬೇಕು.
ದೈಹಿಕ ಸಾಮರ್ಥ್ಯ ಮಾನದಂಡಗಳು:
- ಎತ್ತರ: ಕನಿಷ್ಠ 165 ಸೆಂ.ಮೀ.
- ತೂಕ: ಕನಿಷ್ಠ 50 ಕೆ.ಜಿ.
- ಓಟ: 100 ಮೀಟರ್ 15 ಸೆಕೆಂಡ್ ಒಳಗೆ.
ಕುಕ್ ಹುದ್ದೆಗಳಿಗೋಸ್ಕರ:
- SSLC/10ನೇ ತರಗತಿ ಪಾಸು.
- ಹೋಟೆಲ್ ಅಥವಾ ಸಂಸ್ಥೆಯಲ್ಲಿ ಅಡುಗೆ ಅನುಭವ.
- ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದವರಿಗೆ ಹೆಚ್ಚು ಆದ್ಯತೆ.
- ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಬಹುದು.
ಅರ್ಜಿ ಶುಲ್ಕ ಎಷ್ಟಿರುತ್ತೆ..?
- ಸಾಮಾನ್ಯ ಅಭ್ಯರ್ಥಿಗಳಿಗೆ: ₹500/-
- SC/ST/PwD/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
- ಇದರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಅರ್ಜಿ ಶುಲ್ಕದ ಕುರಿತು ನೋಟಿಫಿಕೇಶನ್ ಚೆಕ್ ಮಾಡಿ ಕೆಳಗಡೆ ಒದಗಿಸಲಾಗಿದೆ.
ಪಾವತಿ ವಿಧಾನ ಹೆಗೆ..?
- ನೆಟ್‌ಬ್ಯಾಂಕಿಂಗ್
- UPI (PhonePe, Google Pay, Paytm)
- ಕ್ರೆಡಿಟ್/ಡೆಬಿಟ್ ಕಾರ್ಡ್
ಆಯ್ಕೆ ಪ್ರಕ್ರಿಯೆ ಹೇಗಾಗುತ್ತೆ..?
ಫೈರ್‌ಮನ್ & ಕುಕ್ ಹುದ್ದೆಗಳಿಗೆ:
- ನೇರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆಗಳ ಮೂಲಕ ನೇಮಕಾತಿ ನಡೆಯುತ್ತೆ.
ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು:
- ಲಿಖಿತ ಪರೀಕ್ಷೆಗೆ ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಓದಿ.
- ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತಕ್ಕೆ ಹೆಚ್ಚು ಗಮನ ಕೊಡಿ.
- ಕುಕ್ ಹುದ್ದೆಗೆ ದೈನಂದಿನ ಪಾಕವಿಧಾನ ಅಭ್ಯಾಸ ಮಾಡಿ.
ನಮ್ಮ ಕೊನೆಯ ಮಾತು:
ISRO VSSC ನೇಮಕಾತಿ 2025 ಭಾರತದ ಯುವಕರಿಗೆ ದೊಡ್ಡ ಅವಕಾಶ ಅಂತ ಹೇಳಬಹುದು ಏಕೆಂದರೆ ಪ್ರಸ್ತುತ ಈ ಒಂದು ಎಲ್ಲಾ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದ್ದು ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿದ್ದರೆ ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ನಿಮಗೆ ಸಿಕ್ಕಂತಾಗುತ್ತದೆ.
ಪ್ರಮುಖ ಲಿಂಕುಗಳು
| 🔗 Link Type | Link |
| ಅಧಿಕೃತ ಅಧಿಸೂಚನೆ PDF Notification PDF | Click Here |
| ಅಧಿಕೃತ ವೆಬ್ಸೈಟ್ Official Website | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
| ವಾಟ್ಸಾಪ್ ಚಾನೆಲ್ WhatsApp Channel | Click Here |
| ಟೆಲಿಗ್ರಾಂ ಚಾನೆಲ್Telegram Channel | Click Here |
FAQs – ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
1. ಈ ನೇಮಕಾತಿಯಲ್ಲಿ ಯಾವ ಹುದ್ದೆಗಳಿವೆ?
ಫೈರ್‌ಮನ್ ಮತ್ತು ಕುಕ್.
2. ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು?
ಕನಿಷ್ಠ SSLC ಪಾಸಾಗಿರಬೇಕು.
3. ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ ₹500, ಇತರರಿಗೆ ಶುಲ್ಕ ಇರುವುದಿಲ್ಲ.
4. ವೇತನ ಎಷ್ಟು ಸಿಗುತ್ತದೆ?
₹19,900 – ₹63,200 + ಭತ್ಯೆಗಳು.
5. ವಯೋಮಿತಿ ಎಷ್ಟು?
18 ರಿಂದ 25 ವರ್ಷ, ಮೀಸಲಾತಿ ಅಭ್ಯರ್ಥಿಗಳಿಗೆ ಸಡಿಲಿಕ್ಕೆ ಸಹ ಇರುತ್ತೆ.
6. ಆಯ್ಕೆ ಪ್ರಕ್ರಿಯೆ ಹೇಗೆ?
ದಾಖಲೆಗಳ ಪರಿಶೀಲನೆ ನಂತರ ಇಂಟರ್ವ್ಯೂ.
7. ಉದ್ಯೋಗ ಸ್ಥಳ ಎಲ್ಲಿದೆ?
ಮುಖ್ಯವಾಗಿ ತಿರುವನಂತಪುರಂ, ಕೇರಳ.
8. ಅನುಭವ ಬೇಕೆ?
ಕುಕ್ ಹುದ್ದೆಗೆ ಅನುಭವ ಅಗತ್ಯ, ಫೈರ್‌ಮನ್ ಹುದ್ದೆಗೆ ದೈಹಿಕ ಸಾಮರ್ಥ್ಯ ಮುಖ್ಯ.
9. ಅರ್ಜಿ ಹೇಗೆ ಸಲ್ಲಿಸಬೇಕು?
ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಡೆ ನಿಮಗೆ ಅಧಿಕೃತ ಆಧಿ ಸೂಚನೆ ಪಿಡಿಎಫ್ ಲಿಂಕ್ ಮತ್ತು ಅಧಿಕೃತ ವೆಬ್ ಸೈಟ್ಲಿಂಗ್ ಒದಗಿಸುತ್ತೇವೆ. ಇಲ್ಲಿಂದ ಸಹ ಅರ್ಜಿ ಸಲ್ಲಿಸಬಹುದು.
10. ಹಾಲ್‌ಟಿಕೆಟ್ ಹೇಗೆ ಪಡೆಯಬಹುದು?
ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬೇಕು.
