ನಮಸ್ಕಾರ ಸ್ನೇಹಿತರೆ ಇದೀಗ ಪ್ರಸಿದ್ಧ ಕರ್ನಾಟಕ ರೈಲ್ವೆ ಇಲಾಖೆಯು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪಾಸ್ ಆದವರಿಗೆ ಒಟ್ಟು 904 ಹುದ್ದೆಗಳಿಗೆ ಅಪ್ರೆಂಟಿಸ್ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತೆ.
ನಿಮ್ಮ ಕನಸು ಏನಾದರೂ ರೈಲ್ವೆ ಇಲಾಖೆಯಲ್ಲಿ ಹುದ್ದೆ ಪಡೆದುಕೊಳ್ಳಬೇಕು ಎಂಬುದಾದರೆ ಇಂದಿನ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಈ ಲೇಖನವನ್ನ ನೀವೆಲ್ಲರೂ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ನಿಮಗಂತಲೆ ಮಾಹಿತಿಯನ್ನು ಒದಗಿಸಿದ್ದೇವೆ ಹಾಗೆ ತಪ್ಪದೆ ಇಂದಿನ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಈ ಮಾಹಿತಿ ಸಿಗುತ್ತೆ ಅವರು ಕೂಡ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ:ಪ್ರಧಾನಮಂತ್ರಿ ಆವಾಸ್ ಯೋಜನೆ 2025.! ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ.!!
ಭಾರತೀಯ ರೈಲ್ವೆ ರಾಷ್ಟ್ರದ ಅತಿದೊಡ್ಡ ಉದ್ಯೋಗ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಉದ್ಯೋಗ ಅವಕಾಶಗಳನ್ನು ನೀಡುತ್ತದೆ. 2025ರಲ್ಲಿ ಕರ್ನಾಟಕ ರಾಜ್ಯದಲ್ಲಿ ವಿವಿಧ ರೈಲ್ವೆ ವಿಭಾಗಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಲೇಖನದಲ್ಲಿ ನೀವು ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು – ಅರ್ಹತೆ, ಹುದ್ದೆಗಳ ವಿವರ, ಅರ್ಜಿ ಪ್ರಕ್ರಿಯೆ, ವೇತನ, ಮತ್ತು ಇನ್ನಷ್ಟು.
ಕರ್ನಾಟಕ ರೈಲ್ವೆ ನೇಮಕಾತಿಯ ಮುಖ್ಯ ಅಂಶಗಳು 2025:
ಪ್ರಮುಖ ಅಂಶ | ವಿವರ |
ನೇಮಕಾತಿ ಪ್ರಾಧಿಕಾರ | ದಕ್ಷಿಣ ಪಶ್ಚಿಮ ರೈಲ್ವೆ (South Western Railway), ಬೆಂಗಳೂರು |
ನೇಮಕಾತಿಯ ಹೆಸರು | ಕರ್ನಾಟಕ ರೈಲ್ವೆ ನೇಮಕಾತಿ 2025 |
ಹುದ್ದೆಗಳ ಸಂಖ್ಯೆ | ವಿವಿಧ ಹುದ್ದೆಗಳು ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಇರುತ್ತೆ. |
ಅರ್ಜಿ ವಿಧಾನ | ಆನ್ಲೈನ್ |
ಅರ್ಜಿ ಶುಲ್ಕ | ಸಾಮಾನ್ಯ: ₹500 / ಹಿಂದುಳಿದ ವರ್ಗ: ₹250 / ಎಸ್‌ಸಿ/ಎಸ್‌ಟಿ/ಮಹಿಳೆ: ಶುಲ್ಕವಿಲ್ಲ |
ಆಯ್ಕೆ ವಿಧಾನ | ಲಿಖಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ಫಿಟ್‌ನೆಸ್ ಪರೀಕ್ಷೆ |
ಅಧಿಕೃತ ವೆಬ್‌ಸೈಟ್ | educationkannada.in |
ಖಾಲಿ ಹುದ್ದೆಗಳ ವಿವರ:
Table of Contents
ಕರ್ನಾಟಕ ರೈಲ್ವೆ ನೇಮಕಾತಿ 2025: ಹುದ್ದೆಗಳ ಸಂಪೂರ್ಣ ಪಟ್ಟಿ

ಟ್ರೇಡ್ ಹೆಸರು | ಲಭ್ಯವಿರುವ ಹುದ್ದೆಗಳ ಸಂಖ್ಯೆ |
ಫಿಟರ್ (ಸಾಮಾನ್ಯ ವಿಭಾಗ) | 286 |
ವೆಲ್ಡಿಂಗ್ ತಂತ್ರಜ್ಞರು | 55 |
ವಿದ್ಯುತ್ ತಜ್ಞರು | 152 |
ತಂಪುಕರಣ ಮತ್ತು ಎಸಿ ಯಂತ್ರ ತಜ್ಞರು | 16 |
ಪ್ರೋಗ್ರಾಮಿಂಗ್ ಮತ್ತು ವ್ಯವಸ್ಥಾಪಕ ಸಹಾಯಕ (PASAA) | 138 |
ಮೆಷಿನ್ ಕಾರ್ಯ ತಜ್ಞರು | 13 |
ಟರ್ನರ್ (ಘಟಕ ತಯಾರಕ) | 13 |
ಮರದ ಕೆಲಸಗಾರರು (ಕಾರ್ಪೆಂಟರ್) | 11 |
ಬಣ್ಣ ಹಚ್ಚುವ ತಜ್ಞರು (ಪೇಂಟರ್) | 18 |
ಫಿಟರ್ – ಡೀಸೆಲ್ ಲೊಕೋ ಶೆಡ್ ವಿಭಾಗದಲ್ಲಿ | 37 |
ಎಲೆಕ್ಟ್ರಿಷಿಯನ್ – ಡೀಸೆಲ್ ಲೊಕೋ ಶೆಡ್ ವಿಭಾಗ | 17 |
ಎಲೆಕ್ಟ್ರಿಷಿಯನ್ – ಜನರಲ್ ವಿಭಾಗ | 79 |
ಫಿಟರ್ – ಕ್ಯಾರೇಜ್ ಮತ್ತು ವೇಗನ್ ವಿಭಾಗದಲ್ಲಿ | 67 |
ಶೀಘ್ರಲಿಪಿಗಾರ (ಸ್ಟೆನೋಗ್ರಾಫರ್) | 2 |
ಒಟ್ಟು ಹುದ್ದೆಗಳ ಸಂಖ್ಯೆ | 904 |
1. ಟ್ರೇಡ್ ಅಪ್ರೆಂಟಿಸ್ (Trade Apprentice)
- ವಿದ್ಯಾರ್ಹತೆ: SSLC/10th ಪಾಸ್ + ITI (NCVT/SCVT ಮಾನ್ಯತೆ)
- ಹುದ್ದೆಗಳ ಸಂಖ್ಯೆ: ವಿವಿಧ
- ಉದ್ಯೋಗ ಸ್ಥಳ: ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗ.
2. ಗೂಡ್ಸ್ ಗಾರ್ಡ್ (Goods Guard)
- ವಿದ್ಯಾರ್ಹತೆ: ಯಾವುದೇ ಡಿಗ್ರಿ
- ಆಯ್ಕೆ ವಿಧಾನ: CBAT (Computer Based Aptitude Test)
3. ಟಿಕೆಟ್ ಕಲ್ಯಾಣ ನಿರೀಕ್ಷಕ ಹುದ್ದೆ (Ticket Clerk)
- ವಿದ್ಯಾರ್ಹತೆ: PUC ಅಥವಾ ಡಿಗ್ರಿ
- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
4. ತಾಂತ್ರಿಕ ಸಹಾಯಕ (Technician)
- ವಿದ್ಯಾರ್ಹತೆ: ಡಿಪ್ಲೊಮಾ ಅಥವಾ ಐಟಿಐ
- ಆಯ್ಕೆ ವಿಧಾನ: ಲಿಖಿತ ಪರೀಕ್ಷೆ + ಟ್ರೇಡ್ ಟೆಸ್ಟ್
ವಿದ್ಯಾರ್ಹತೆ & ವಯೋಮಿತಿ:
ವಿದ್ಯಾರ್ಹತೆ:
- ಹುದ್ದೆಗನುಸಾರ 10ನೇ ತರಗತಿ, ITI, ಡಿಪ್ಲೊಮಾ, ಅಥವಾ ಪದವಿ ಅಗತ್ಯವಿದೆ.
- ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ವಿಷಯಗಳು ಪ್ರಕಾರ ಅರ್ಜಿ ಸಲ್ಲಿಸಬೇಕು.
ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: ಸಾಮಾನ್ಯ ಅಭ್ಯರ್ಥಿಗಳಿಗೆ 33 ವರ್ಷ
- ಮೀಸಲು ವರ್ಗದವರಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ವಿನಾಯಿತಿ ಇದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ:
ಅಭ್ಯರ್ಥಿಗಳ ಆಯ್ಕೆ ಈ ಹಂತಗಳ ಮೂಲಕ ನಡೆಯಲಿದೆ ದಯವಿಟ್ಟು ಸರಿಯಾಗಿ ಓದಿ ಅಂತರವೇ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ:
- ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಅಂದರೆ ಸಾಮಾನ್ಯ ಜ್ಞಾನ, ಗಣಿತ, ಲಾಜಿಕಲ್ ರೀಸನಿಂಗ್ ಮತ್ತು ತಾಂತ್ರಿಕ ವಿಷಯಗಳು.
- ದಾಖಲೆಗಳ ಪರಿಶೀಲನೆ ಮೂಲಕ ಅಂದರೆ ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಗುರುತಿನ ದಾಖಲೆಗಳು ಪರಿಶೀಲನೆ.
- ಆರೋಗ್ಯ ತಪಾಸಣೆ ರೈಲ್ವೆ ವೈದ್ಯಕೀಯ ಮಂಡಳಿ ನಡೆಸುವ ಫಿಟ್‌ನೆಸ್ ಪರೀಕ್ಷೆ.
Note: ಕೆಲವು ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಕೂಡಾ ಅಗತ್ಯವಿರಬಹುದು.
ವೇತನ ಮಾಹಿತಿ ವಿವರಣೆ:
ಪ್ರತಿ ಹುದ್ದೆಯ ವೇತನವು 7ನೇ ವೇತನ ಆಯೋಗದ ಪ್ರಕಾರವಾಗಿ ನೀಡಲಾಗುತ್ತೆ ಗಮನಿಸಿ.
- ಅಪ್ರೆಂಟಿಸ್‌ಗಳು ಶಿಕ್ಷಣ ಅವಧಿಯಲ್ಲಿ ತಿಂಗಳಿಗೆ ₹7,000 – ₹9,000
- ಟಿಕೆಟ್ ಕ್ಲರ್ಕ್ / ಗೂಡ್ಸ್ ಗಾರ್ಡ್ – ₹21,700 – ₹35,400
- ಟೆಕ್ನಿಷಿಯನ್ / ಸಹಾಯಕ ಇಂಜಿನಿಯರ್‌ಗಳು – ₹29,200 – ₹44,900
ವೇತನದ ಜೊತೆಗೆ DA, HRA, TA, PF, ಪಿಂಚಣಿ ಮುಂತಾದ ಸೌಲಭ್ಯಗಳೂ ಲಭ್ಯವಿರುತ್ತದೆ ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ:

ಈ ಒಂದು ಹುದ್ದೆ ಮೂಲಕ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ಏನೆಂದರೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಮಾತ್ರ ಸಾಧ್ಯ ಇರುತ್ತೆ ಈ ಕೆಳಗಡೆ ನಿಮಗ ಅಂತಾನೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅಥವಾ ಅಧಿಕೃತ ಆದಿ ಸೂಚನೆ ಪಿಡಿಎಫ್ ಅಂದರೆ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಬಹುದು.
- ಅಧಿಕೃತ ವೆಬ್‌ಸೈಟ್ ತೆರೆಯಿರಿ ಈ ಕೆಳಗಡೆ ಒದಗಿಸಲಾಗಿದೆ
- http://www.rrchubli.in/
- ‘Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಬಳಸಿ ನೊಂದಣಿ ಮಾಡಿಕೊಳ್ಳಿ.
- ಎಲ್ಲ ಅಗತ್ಯ ಮಾಹಿತಿ ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿ ಮಾಡಿ.
- ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್‌ಆಟ್ ತೆಗೆದುಕೊಳ್ಳಿ.
ಬೇಕಾಗಿರುವ ಅಗತ್ಯ ದಾಖಲೆಗಳು:
ಗಮನಿಸಿ ಈ ಕೆಳಗಡೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಇವೆಲ್ಲವನ್ನ ತೆಗೆದುಕೊಂಡು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
- SSLC/PUC/ಡಿಗ್ರಿ ಪ್ರಮಾಣಪತ್ರ
- ITI/NCTV ಪ್ರಮಾಣಪತ್ರ (ಅಪ್ರೆಂಟಿಸ್ ಹುದ್ದೆಗೆ)
- ಜನನ ಪ್ರಮಾಣಪತ್ರ
- ಅಧಾರ್ ಕಾರ್ಡ್
- ಪಾಸ್‌ಪೋರ್ಟ್ ಅಳತೆಯ ಫೋಟೋ
- ಕಮ್ಯುನಿಟಿ ಪ್ರಮಾಣಪತ್ರ (ಅರ್ಜಿದಾರರು ಮೀಸಲು ವರ್ಗಕ್ಕೆ ಸೇರಿದವರು ಇದ್ದರೆ)
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು 2025
ಪ್ರಮುಖ ಅಂಶಗಳು | ದಿನಾಂಕ (ಅಂದಾಜು) |
ಅಧಿಸೂಚನೆ ಬಿಡುಗಡೆಯ ದಿನ | ಜುಲೈ 2025 |
ಆನ್ಲೈನ್ ಅರ್ಜಿ ಪ್ರಾರಂಭ | ಜುಲೈ ಎರಡನೇ ವಾರ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಆಗಸ್ಟ್ 2025 |
ಲಿಖಿತ ಪರೀಕ್ಷೆ ದಿನಾಂಕ | ಸೆಪ್ಟೆಂಬರ್ 2025 |
ಫಲಿತಾಂಶ ಪ್ರಕಟಣೆ | ಅಕ್ಟೋಬರ್ ಅಥವಾ ನವೆಂಬರ್ 2025 |
(ದಿನಾಂಕಗಳು ಅಧಿಕೃತ ಅಧಿಸೂಚನೆಯ ಆಧಾರದ ಮೇಲೆ ಬದಲಾಗಬಹುದು.)
ಕರ್ನಾಟಕ ರೈಲ್ವೆ ನೇಮಕಾತಿ 2025 ಹೆಚ್ಚಿನ ಮಾಹಿತಿ ಗೋಸ್ಕರ ಅಷ್ಟೇ:
ಅಧಿಕೃತ ವೆಬ್‌ಸೈಟ್ ಅಥವಾ ರಿಕ್ರೂಟ್ಮೆಂಟ್ ನೋಟಿಫಿಕೇಶನ್ ಅನ್ನು ನಿಯಮಿತವಾಗಿ ಪರಿಶೀಲಿಸಿ. ಯಾವುದೇ ಸಂದೇಹವಿದ್ದರೆ, ರೈಲ್ವೆ ಹೆಲ್ಪ್‌ಲೈನ್ ಅಥವಾ ಅಧಿಕೃತ ಇಮೇಲ್ ಮೂಲಕ ಸಂಪರ್ಕಿಸಬಹುದು.
ರೈಲ್ವೆ ಇಲಾಖೆ ಹುದ್ದೆಗಳ ವಿಭಾಗವಾರು ವಿವರ:
ಭಾರತೀಯ ರೈಲ್ವೆ ವಿವಿಧ ವಿಭಾಗಗಳಲ್ಲಿ ನೇಮಕಾತಿಯನ್ನು ಕೈಗೊಳ್ಳುತ್ತದೆ. ಕರ್ನಾಟಕದಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ ಯಾವಗಳೆಂದರೆ ಈ ಕೆಳಗಿನಂತಿದೆ ಗಮನಿಸಿ:
1. ಬೆಂಗಳೂರು ವಿಭಾಗ (Bengaluru Division)
ಇದು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ನಿರಂತರವಾಗಿ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿರುತ್ತದೆ. ಉದಾಹರಣೆಗಾಗಿ:
- ಲೋಕೋ ಪೈಲಟ್
- ಗೂಡ್ಸ್ ಗಾರ್ಡ್
- ಟಿಕೆಟ್ ಕ್ಲರ್ಕ್
- ಟ್ರ್ಯಾಕ್ ಮ್ಯಾನಿಟೇನರ್
2. ಮೈಸೂರು ವಿಭಾಗ (Mysuru Division)
ಇದು ಪ್ರವಾಸೋದ್ಯಮದ ಕೇಂದ್ರವಾಗಿದ್ದು, ಟೂರಿಸ್ಟ್ ಟ್ರೈನ್ಗಳ ನಿರ್ವಹಣೆಗೆ ಸಿಬ್ಬಂದಿ ಅಗತ್ಯವಿರುತ್ತದೆ.
- ಟೂರಿಸ್ಟ್ ಗೈಡ್
- ತಾಂತ್ರಿಕ ಸಹಾಯಕರು
- ಕ್ಲಿನಿಂಗ್ ಸ್ಟಾಫ್
- ಸ್ಟೇಷನ್ ಮ್ಯಾನೇಜರ್
3. ಹುಬ್ಬಳ್ಳಿ ವಿಭಾಗ (Hubballi Division)
ಇದು ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ಕಚೇರಿಯಿರುವ ಸ್ಥಳ. ಇಲ್ಲಿ ಅಧಿಕೃತ ಹುದ್ದೆಗಳ ನೇಮಕಾತಿ ಹೆಚ್ಚು ನಡೆಯುತ್ತದೆ.
- ಕಚೇರಿ ಸಹಾಯಕರು (Office Clerks)
- ಡೇಟಾ ಎಂಟ್ರಿ ಆಪರೇಟರ್‌ಗಳು
- ಟೆಕ್ನಿಷಿಯನ್‌ಗಳು
- ಎಂಜಿನಿಯರ್ ಸಹಾಯಕರು
ಹುದ್ದೆಗಳ ಪ್ರಕಾರ ಪರೀಕ್ಷೆಯ ಮಾದರಿ ವಿವರಣೆ:
ನಿಮಗೋಸ್ಕರ ಹುದ್ದೆಗಳ ಪ್ರಕಾರ ಪರೀಕ್ಷೆಯ ಮಾದರಿ ವಿಶ್ಲೇಷಣೆಯನ್ನು ತಿಳಿಸುವುದಾದರೆ ನೋಡಿ ಪರೀಕ್ಷೆಗೆ ತಯಾರು ಮಾಡಲು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ಒದಗಿಸಲಾಗಿದೆ ಹಾಗೆ ಯಾವ ಯಾವ ವಿಷಯಗಳಿಗೆ ಎಷ್ಟು ಪ್ರಶ್ನೆಗಳು ಇರುತ್ತೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ.
ಲಿಖಿತ ಪರೀಕ್ಷೆ (CBT – Computer Based Test)
ಅನೇಕ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುತ್ತದೆ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
ವಿಷಯ | ಪ್ರಶ್ನೆಗಳು | ಅಂಕಗಳು |
ಸಾಮಾನ್ಯ ಜ್ಞಾನ | 25 | 25 |
ಲಾಜಿಕ್ ರೀಸನಿಂಗ್ | 25 | 25 |
ಗಣಿತ | 25 | 25 |
ತಾಂತ್ರಿಕ ವಿಷಯ (ಅಗತ್ಯವಿದ್ದರೆ ಮಾತ್ರ) | 25 | 25 |
ಒಟ್ಟು | 100 | 100 |
ಸಮಯ: 90 ನಿಮಿಷ
ನೆಗೆಟಿವ್ ಮಾರ್ಕಿಂಗ್: 1 ತಪ್ಪು ಉತ್ತರಕ್ಕೆ 0.25 ಅಂಕ ಕಡಿತ
ಅಂದರೆ ಗಮನಕ್ಕೆ ಒಂದು ತಪ್ಪು ಮಾಡಿದರೆ ಸರಿಯಾದ ಉತ್ತರದಲ್ಲಿ 0.25 ಅಂಕ ಕಳಿಯುತ್ತಾರೆ ಅಂದರೆ ನಾಲ್ಕು ತಪ್ಪು ಮಾಡಿದರೆ ಒಂದು ಸರಿ ಇದ್ದ ಉತ್ತರ ಗೋವಿಂದಾ ಗೋವಿಂದ ಆಗುತ್ತೆ ಅಂದರೆ ಸರಿಯಿದ್ದ ಉತ್ತರ ಕೂಡ ಸೊನ್ನೆ ಆಗುತ್ತೆ.
ರೈಲ್ವೆ ಹುದ್ದೆಗಳ ಸೌಲಭ್ಯಗಳು:
ರೈಲ್ವೆಯಲ್ಲಿ ಉದ್ಯೋಗ ಪಡೆದವರಿಗಾಗಿ ಹಲವಾರು ಅದ್ಭುತ ಸೌಲಭ್ಯಗಳು ಲಭ್ಯವಿವೆ ಈ ಕೆಳಗಿನಂತಿದೆ ಗಮನಿಸಿ:
- ಪಿಂಚಣಿ ಯೋಜನೆ (NPS)
- ಆರೋಗ್ಯ ಸೇವೆ (Railway Health Scheme)
- ರೈಲ್ವೆ ಸಿಬ್ಬಂದಿಗೆ ಉಚಿತ/ಕಡಿಮೆ ದರದ ಟಿಕೆಟ್
- ಪರಿವಾರ ಸದಸ್ಯರಿಗೆ ಶಿಕ್ಷಣ ಸೌಲಭ್ಯ
- ವಾರ್ಷಿಕ ರಜೆ, ಎಲ್ಟಿಸಿ
- ವೃತ್ತಿಪರ ಅಭಿವೃದ್ದಿಗೆ ತರಬೇತಿ
ಕರ್ನಾಟಕ ರೈಲ್ವೆ ನೇಮಕಾತಿಗೆ ತಯಾರಿ ಹೇಗೆ ಎಂದು ತಿಳಿಯುತ್ತಿಲ್ಲವೇ ಇಲ್ಲಿ ಗಮನಿಸಿ:
ಕರ್ನಾಟಕ ರೈಲ್ವೆ ಇಲಾಖೆ ನೇಮಕಾತಿ 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹೇಗೆ ಓದಬೇಕು ಏನೆಲ್ಲ ಗಮನಿಸಬೇಕು ಎಂಬ ಪ್ರಶ್ನೆ ಹಲವಾರು ಅಭ್ಯರ್ಥಿಗಳಿಗೆ ಕಣ್ಣಲ್ಲಿ ಕಟ್ಟಂತಾಗುತ್ತೆ ಹೀಗಾಗಿ ನಿಮಗಂತಲೇ ಈ ಕೆಳಗಿನಂತಿದೆ ನೋಡಿ ಮಾಹಿತಿ.
1. ಪಠ್ಯಕ್ರಮ ತಿಳಿಯಿರಿ
ಪ್ರತಿಯೊಂದು ಹುದ್ದೆಗೆ ಇರುವ ಪಠ್ಯಕ್ರಮವನ್ನು ಅಧಿಕೃತ ಅಧಿಸೂಚನೆಯಲ್ಲಿ ಓದಿ, ಮುಖ್ಯ ವಿಷಯಗಳ ಗುರುತಿಸಿ.
2. ದಿನಚರಿ ರೂಪಿಸಿಕೊಳ್ಳಿ
ಪ್ರತಿಯೊಂದು ವಿಷಯದ ಓದಿಗೆ ನಿಗದಿತ ಸಮಯ ಮೀಸಲಿಡಿ. ಪ್ರತಿದಿನವೂ ಕನಿಷ್ಠ 4-6 ಗಂಟೆ ಓದುವ ಅಭ್ಯಾಸ ಬೆಳಸಿರಿ.
3. ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ
ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆಗಳ ಅಭ್ಯಾಸ ಮಾಡುವ ಮೂಲಕ ಪ್ರಶ್ನೆ ಶೈಲಿಗೆ ಪರಿಚಯವಾಗಬಹುದು.
ಇಲ್ಲಿ ಗಮನಿಸಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ. ಹಾಗೆ ಒಂದಕ್ಕೊಂದು ಹೋಲಿಸಿ, ಯಾವ ರಿಪೀಟ್ ಆಗಿದೆ ಪ್ರಶ್ನೆ ಎಂಬುದನ್ನ ರೌಂಡಪ್ ಮಾಡಿಕೊಳ್ಳಿ ಹಾಗೆ ಯಾವ ರೌಂಡ್ ಮಾಡಿರ್ತೀರಲ್ಲವೇ ಪ್ರಶ್ನೆಗಳನ್ನ ಅವುಗಳನ್ನು ತೆಗೆಯಿರಿ ಹಾಗೆ ಹಳೆಯ ವರ್ಷದ ಅಂದರೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ಓದಿ ಬಿಡಿಸಿ.
4. ಮ್ಯಾಕ್ ಟೆಸ್ಟ್‌ಗಳು
ಮ್ಯಾಕ್ ಟೆಸ್ಟ್‌ಗಳನ್ನು ತೆಗೆದುಕೊಳ್ಳುವುದು ನಿಮ್ಮ ಸಮಯ ನಿರ್ವಹಣೆಯ ಮತ್ತು ಅಳವಡಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಮೀಸಲಾತಿ ನಿಲುವು ವಿವರಣೆ:
ಭಾರತೀಯ ರೈಲ್ವೆ ನೇಮಕಾತಿಯಲ್ಲಿ ಮೀಸಲಾತಿಯು ಭಾರತ ಸರ್ಕಾರದ ನಿಯಮಗಳ ಪ್ರಕಾರ ಇರುತ್ತದೆ:
ವರ್ಗ | ಮೀಸಲಾತಿ ಶೇಕಡಾವಾರು |
SC | 15% |
ST | 7.5% |
OBC | 27% |
EWS | 10% |
PwD | 4% (ಹುದ್ದೆ ಪ್ರಕಾರ) |
ಮಹಿಳಾ ಅಭ್ಯರ್ಥಿಗಳು | ಎಲ್ಲ ವರ್ಗಗಳಲ್ಲಿಯೂ ಮೀಸಲಾತಿ ಲಭ್ಯವಿದೆ |
ನೋಟ: ಮೀಸಲಾತಿಯ ಲಾಭ ಪಡೆಯಲು ಮಾನ್ಯತೆ ಪಡೆದ ಪ್ರಮಾಣಪತ್ರ ಹೊಂದಿರುವುದು ಅಗತ್ಯ.
ರೈಲ್ವೆ ನೇಮಕಾತಿಗೆ ಸಂಬಂಧಿಸಿದ ಕೆಲವೊಂದಿಷ್ಟು ತಂತ್ರಾಂಶಗಳು:

- ನಿಮ್ಮ ವಿದ್ಯಾರ್ಹತೆ ಗಮನಿಸಿ (SSLC, ITI, ಡಿಪ್ಲೊಮಾ, ಡಿಗ್ರಿ)
- ಅಭಿರುಚಿ ಮತ್ತು ಆಸಕ್ತಿ (ತಾಂತ್ರಿಕವೋ ಅಥವಾ ಆಡಳಿತಾತ್ಮಕವೋ ಎಂಬುದನ್ನ ನೀವು ಮೊದಲು ಅರ್ಥಮಾಡಿಕೊಳ್ಳಬೇಕು)
- ವಯಸ್ಸು, ಲಭ್ಯತೆ, ಮತ್ತು ಸ್ಥಳೀಯ ಭಾಷಾ ಪರಿಚಯ ಕೂಡಾ ಗಮನವಿರಲಿ
ಭಾರತದಲ್ಲಿ ರೈಲ್ವೆಯ ಭವಿಷ್ಯ ಮತ್ತು ಉದ್ಯೋಗ ಸಾಧ್ಯತೆ ಹೇಗೆ:
2025 ಮತ್ತು ಮುಂದೆ ರೈಲ್ವೆಯಲ್ಲಿ ಹೊಸ ಟೆಕ್ನಾಲಜಿ, ಹೈ-ಸ್ಪೀಡ್ ರೈಲುಗಳು, ಮೇಕ್ ಇನ್ ಇಂಡಿಯಾ ಯೋಜನೆಗಳ ಹಿನ್ನೆಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಕೇಂದ್ರ ಸರ್ಕಾರದ ಯೋಜನೆಗಳಂತೆ ರೈಲ್ವೆ ಇಲಾಖೆಯಾದ್ಯಂತ:
- ಹೊಸ ಹುದ್ದೆಗಳ ನಿರ್ಮಾಣ
- ಹಳೆಯ ಹುದ್ದೆಗಳ ಪುನಃ ಚಟುವಟಿಕೆ
- ಪಿಸಿ ಆಧಾರಿತ ಪರೀಕ್ಷೆಗಳ ಸರಳೀಕರಣ
- ಹೊಸ ಬಡಿಗೆ ಲೈನ್‌ಗಳ ನಿರ್ಮಾಣ
- ಪ್ರಯಾಣಿಕ ಸೇವೆಗಳ ವಿಸ್ತರಣೆ
ಇವೆಲ್ಲವೂ ಸೇರಿ ಹೊಸ ಅಭ್ಯರ್ಥಿಗಳಿಗೆ ಉತ್ತಮ ಅವಕಾಶಗಳನ್ನು ತರುತ್ತವೆ ಎಂದು ಹೇಳಬಹುದು ಮುಂಬರುವ ವರ್ಷಗಳಲ್ಲಿ.
ಮಾರ್ಗದರ್ಶನ ಮತ್ತು ತಂತ್ರಜ್ಞಾನ ವಿಶೇಷವಾಗಿ ರೈಲ್ವೆ ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೋಸ್ಕರ :
ನೀವು ಮೊದಲ ಬಾರಿಗೆ ರೈಲ್ವೆ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರೆ, ಈ ವೆಬ್‌ಸೈಟ್‌ಗಳು/ಅ್ಯಪ್‌ಗಳು ಸಹಾಯಕವಾಗಬಹುದು:
- Testbook
- Adda247
- Gradeup
- Unacademy (Railway Exams)
- YouTube ನಲ್ಲಿ ಮಾದರಿ ಕ್ಲಾಸ್‌ಗಳು (Kannada Channels)
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ:14.07.2025
ಅಂತಿಮ ದಿನಾಂಕ:13.08.2025 ರಾತ್ರಿ PM 11:59
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಲಿಂಕ್: Click here
ಆನ್ಲೈನ್ ಅರ್ಜಿ ಲಿಂಕ್:Click here
ನಮ್ಮ ಕೊನೆಯ ಮಾತು:
ಕರ್ನಾಟಕ ರೈಲ್ವೆ ನೇಮಕಾತಿ 2025 ಹೊಸ ಉದ್ಯೋಗಾಸಕ್ತರು, ಯುವಕ-ಯುವತಿಯರು ಮತ್ತು ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಉತ್ತಮ ಅವಕಾಶವೊಂದಾಗಿದೆ. ಇದು ಕೇವಲ ಉದ್ಯೋಗವಲ್ಲ; ಇದು ಒಳ್ಳೆಯ ವೇತನ, ಭದ್ರತೆ, ಸೌಲಭ್ಯ, ಹಾಗೂ ಸಮಾಜದಲ್ಲಿ ಗೌರವವನ್ನು ನೀಡುವ ವೃತ್ತಿಯಾಗಿದೆ.
ಅದರಂತೆ, ಅಧಿಕೃತ ವೆಬ್‌ಸೈಟ್‌ನಲ್ಲಿ ದಿನದಿನದ ನವೀಕರಣಗಳನ್ನು ಗಮನಿಸಿ, ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಮತ್ತು ಪರೀಕ್ಷೆಗೆ ಸಮರ್ಪಕ ತಯಾರಿ ಮಾಡಿ.
ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು (FAQ)
6. ರೈಲ್ವೆ ಹುದ್ದೆಗೆ ಕನ್ನಡ ಭಾಷೆ ಅಗತ್ಯವಿದೆಯೆ?
ಉತ್ತರ: ಹೌದು. ಕರ್ನಾಟಕದ ನೇಮಕಾತಿಗೆ ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ತಿಳಿವಳಿಕೆ ಹೊಂದಿರುವುದು ಹೆಚ್ಚಾಗಿ ಒತ್ತಾಯಿಸಲಾಗುತ್ತದೆ.
7. ರೈಲ್ವೆ ಅಪ್ರೆಂಟಿಸ್ ಕೆಲಸವೇನು?
ಉತ್ತರ: ರೈಲ್ವೆ ಅಪ್ರೆಂಟಿಸ್ ಕೆಲಸವು ತರಬೇತಿ ಆಧಾರಿತ ಹುದ್ದೆಯಾಗಿದ್ದು, ITI ಪಾಸ್ ಆಗಿರುವವರು ತಮ್ಮ ತಾಂತ್ರಿಕ ಪ್ರಾಯೋಗಿಕ ಜ್ಞಾನವನ್ನು ಗುರ್ತಿಸಲು ಈ ಕೆಲಸ ಲಭ್ಯವಿರುತ್ತದೆ.
8. ಗೂಡ್ಸ್ ಗಾರ್ಡ್ ಕೆಲಸದ ಹೊಣೆಗಾರಿಕೆ ಏನು ಇರುತ್ತೆ?
ಉತ್ತರ: ಗೂಡ್ಸ್ ಗಾರ್ಡ್ ರೈಲು ಸಾಗಣೆಯ ಸುರಕ್ಷತೆ, ಶ್ರೇಣೀಬದ್ಧ ಸರಕಿನ ಗಮನ, ಸ್ಟೇಷನ್ ವರದಿ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ.
9. ರೈಲ್ವೆ ನೌಕರರಿಗೆ ಬದಲಾವಣೆ (Transfer) ಆಗುತ್ತದೆಯೆ?
ಉತ್ತರ: ಹೌದು. ರೈಲ್ವೆ ಕೇಂದ್ರ ಸರ್ಕಾರದ ಇಲಾಖೆಯಾಗಿರುವ ಕಾರಣ, ಅಗತ್ಯವಿದ್ದರೆ ಭಾರತೀಯ ರೈಲ್ವೆಯ ಯಾವುದೇ ವಿಭಾಗಕ್ಕೆ ವರ್ಗಾವಣೆ ಸಾಧ್ಯವಿದೆ.
10. ರೈಲ್ವೆ ನೇಮಕಾತಿಯಲ್ಲಿ ಮಹಿಳೆಯರಿಗೆ ಅವಕಾಶವಿದೆಯೆ?
ಉತ್ತರ: ಖಂಡಿತವಾಗಿಯೂ. ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಲಭ್ಯವಿದೆ. ಅನೇಕ ಹುದ್ದೆಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ.