ಪ್ರಧಾನಮಂತ್ರಿ ಆವಾಸ್ ಯೋಜನೆ 2025.! ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಕೇಂದ್ರ ಸರಕಾರ ಅಂದರೆ ಮೋದಿ ಸರ್ಕಾರ.

ಪ್ರಸ್ತುತ ಈ ಒಂದು ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತಮನೆ ಅಥವಾ ಖಾಲಿ ಜಾಗ ಇದ್ದವರಿಗೆ ಮನೆ ಕಟ್ಟಿಸಿಕೊಳ್ಳಲು ಉದ್ದವಾಗಿ ಹಣ ಒದಗಿಸುತ್ತಾರೆ ಇದರಲ್ಲಿ ಹಲವಾರು ವಿಧಗಳಿದ್ದು ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

WhatsApp Group Join Now
Telegram Group Join Now

 ಭಾರತದ ಕೇಂದ್ರ ಸರ್ಕಾರವಾದ ಬಿಜೆಪಿಯು ಜನಸಾಮಾನ್ಯರಿಗಿಂತಲೇ ಆರ್ಥಿಕವಾಗಿ , ಸಮಾಜಿಕವಾಗಿ, ಹಾಗೂ ವಸತಿ ಸಹಾಯ ನೀಡುವ ನಿಟ್ಟಿನಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಒಂದು ಪ್ರಮುಖ ಹಾಗೂ ಜನಪ್ರಿಯ ಯೋಜನೆ ಎಂದರೆ ಪ್ರಧಾನಮಂತ್ರಿಯ ಆವಾಸ್ ಯೋಜನೆ (PMAY)

ಒಂದು ಪ್ರಧಾನ ಮಂತ್ರಿ ಆವಾಸ್  ಯೋಜನೆಯ ಉದ್ದೇಶ, ದೇಶದ ಎಲ್ಲಾ ಬಡ ಕುಟುಂಬಗಳಿಗೆ 2028 ರೊಳಗೆ ಪಕ್ಕಾ ಮನೆ ನಿರ್ಮಿಸಿ ನೀಡುವುದು ಎಂಬ ಮಹತ್ವಾಕಾಂಕ್ಷೆಯದ್ದಾಗಿದೆ.

ಈ ಲೇಖನದಲ್ಲಿ, ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಸಂಪೂರ್ಣ ವಿವರಗಳು, ಅರ್ಹತೆ, ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ, ಯೋಜನೆಯ ಲಾಭಗಳು, ಮತ್ತು ಇತರ ಮಹತ್ವದ ಅಂಶಗಳ ಕುರಿತು ವಿವರವಾಗಿ ತಿಳಿಸಿಕೊಳ್ಳೋಣ.

ಪ್ರಧಾನಮಂತ್ರಿಯ ಆವಾಸ್ ಯೋಜನೆ ಉದ್ದೇಶವೇನು.?

ಪ್ರಧಾನಮಂತ್ರಿಯ ಆವಾಸ್ ಯೋಜನೆ (Pradhan Mantri Awas Yojana) 2015ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು.

ಇದರ ಮೂಲ ಉದ್ದೇಶ, “ಸರ್ವರಿಗೂ ಉಚಿತ ಮನೆ” ಎಂಬ ಧ್ಯೇಯದೊಂದಿಗೆ ಬಡವರಿಗೆ (ಗ್ರಾಮಾಂತರ ಹಾಗೂ ಶಹರ ಪ್ರದೇಶದ) ಪಕ್ಕಾ ಮನೆಗಳು ನಿರ್ಮಿಸಿ ಕೊಡುವುದು ಇದೇ ಪ್ರಕ್ರಿಯೆ ಆಗಿರುತ್ತೆ.

ಪ್ರಸ್ತುತ ಈ ಒಂದು ಯೋಜನೆ ಎರಡು ಭಾಗಗಳಲ್ಲಿ ಲಭ್ಯವಿದೆ ಈ ಕೆಳಗಿನಂತೆ ವಿವರಿಸಲಾಗಿದೆ ಗಮನಿಸಿ:

  • PMAY-Gramin (PMAY-G) – ಗ್ರಾಮಾಂತರ ಪ್ರದೇಶದ ಮನೆಗಳಿಗಾಗಿ ಅಂದರೆ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನಗಳಿಗೆ.
  • PMAY-Urban (PMAY-U) – ನಗರ ಪ್ರದೇಶದ ಮನೆಗಳಿಗಾಗಿ(ನಗರ ಪ್ರದೇಶಗಳಾದ ಬೆಂಗಳೂರು ಹುಬ್ಬಳ್ಳಿ ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಸಾಮಾನ್ಯವಾಗಿ ಅರ್ಥವಾಗಬೇಕೆಂದರೆ ಸಿಟಿ ಪ್ರದೇಶಗಳಲ್ಲಿ)

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶಗಳು:

Table of Contents

  • 2028 ರೊಳಗೆ ಎಲ್ಲ ಬಡ ಕುಟುಂಬಗಳಿಗೆ ಪಕ್ಕಾ ಮನೆಗಳ ನಿರ್ಮಾಣ ಮಾಡಿಕೊಡುವುದು.
  • ಮಹಿಳೆಯರ ಹೆಸರಿನಲ್ಲಿ ಅಥವಾ ಸಹ ಮಾಲೀಕತ್ವದಲ್ಲಿ ಮನೆ ನೀಡುವುದು
  • ಗೃಹರಹಿತ ಮತ್ತು ನಾನ್-ಪಕ್ಕಾ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸಹಾಯ
  • ಶೇ.100% ಪಕ್ಕಾ ಮನೆಗಳ ಸಾಧನೆ
  • ಮನೆಗಳೊಂದಿಗೆ ಮೂಲಸೌಕರ್ಯಗಳೂ (ವಿದ್ಯುತ್, ಶೌಚಾಲಯ, ಕುಡಿಯುವ ನೀರು ಒದಗಿಸುವುದು)

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಮುಖ ಲಕ್ಷಣಗಳು:

  • ಹೆಚ್ಚಿನ ಆರ್ಥಿಕ ನೆರವು: ಗ್ರಾಮಾಂತರ ಪ್ರದೇಶದ ಮನೆಗೆ ₹1.20 ಲಕ್ಷವರೆಗೆ ಹಣ ಸಹಾಯ  ಅಂದರೆ ಮನೆ ಕಟ್ಟಿಕೊಳ್ಳಲು ಒಂದು ಪಾಯಿಂಟ್ 20 ಲಕ್ಷ ರೂಪಾಯಿ ಸಹಾಯಧನ.
  • ಭೂಮಿ ಹೊಂದಿಲ್ಲದವರಿಗೆ: ಇತರೆ ಯೋಜನೆಗಳ ಸಹಾಯದಿಂದ ಭೂಮಿಯ ಸಹಾಯ.
  • ಪಕ್ಕಾ ಮನೆ ವಿನ್ಯಾಸ: ಸ್ಥಳೀಯ ಹವಾಮಾನ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮನೆ ವಿನ್ಯಾಸ.
  • ಮನೆ ನಿರ್ಮಾಣಕ್ಕೆ ಉಚಿತ ತಾಂತ್ರಿಕ ಮಾರ್ಗದರ್ಶನ.
  • ಬ್ಯಾಂಕ್ ಲೋನ್ ಮೇಲೆ ಬಡ್ಡಿದರದಲ್ಲಿ ರಿಯಾಯಿತಿ ದೊರೆಯುತ್ತೆ ಒಂದು ವೇಳೆ ನೀವು ಹೆಚ್ಚಿನ ಹಣ ತೆಗೆದುಕೊಳ್ಳಲು ಮುಂದಾದರೆ ಕೇವಲ ಮನೆ ಕಟ್ಟಿಸಿಕೊಳ್ಳಲು. 

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆ ಯಾರಿಗೆ..?

ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತಾ ಮಾನದಂಡಗಳಿವೆ ಇವುಗಳನ್ನು ನೀವು ಪೂರೈಸಿದರೆ ಆರಾಮವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಕೆಳಗಿನಂತೆ ಮಾಹಿತಿಯನ್ನು ವಿವರಿಸಲಾಗಿದೆ ಎಲ್ಲರೂ ಗಮನಿಸಿ. 

1. ಕುಟುಂಬದ ವಾರ್ಷಿಕ ಆದಾಯ ಅನ್ವಯವಾಗುತ್ತೆ:

  • PMAY-Gramin: ಬಿಪಿಎಲ್ ಪಟ್ಟಿಯಲ್ಲಿ ಇರುವ ಕುಟುಂಬಗಳು, ಗ್ರಾಮ ಪಂಚಾಯತಿ ಶಿಫಾರಸು ಮಾಡಿದ ಕುಟುಂಬಗಳು.
  • PMAY-Urban:
    • EWS (ಆರ್ಥಿಕವಾಗಿ ದುರ್ಬಲ ವರ್ಗ): ವಾರ್ಷಿಕ ಆದಾಯ ₹3 ಲಕ್ಷದೊಳಗೆ
    • LIG (ನಿಮ್ನ ಮಧ्यम ವರ್ಗ): ವಾರ್ಷಿಕ ಆದಾಯ ₹3-6 ಲಕ್ಷ
    • MIG-I: ₹6-12 ಲಕ್ಷ
    • MIG-II: ₹12-18 ಲಕ್ಷ

2. ಮನೆ ಇರಬಾರದು

ಅರಬಿ ಸಲ್ಲಿಸುವವರು ಅಥವಾ ನಿಮ್ಮ ಕುಟುಂಬದ ಯಾರಿಗಾದರೂ ಯಾವುದೇ ಭಾಗದಲ್ಲಿ ಸ್ವಂತ ಮನೆ ಇರಬಾರದು ಆದರೆ ಗಮನವಿಡಿ ಖಾಲಿ ಜಾಗ ಇದ್ದರೆ ನಡೆಯುತ್ತೆ. ನಿಮ್ಮ ಹೆಸರಿನಿಂದ ಯಾವುದೇ ಸ್ವಂತ ಮನೆ ಇರಬಾರದು ಅಷ್ಟೇ. 

3. ಮಹಿಳಾ ಮಾಲೀಕತ್ವ 

ಈ ಒಂದು ಯೋಜನೆ ಅಡಿಯಲ್ಲಿ ಆಗುವಂತಹ ಮನೆಗಳು ಮಹಿಳೆಯರ ಹೆಸರಿನಲ್ಲಿ ಅಥವಾ ಅವರ ಸಹ ಮಾಲೀಕತ್ವದಲ್ಲಿ ಇರಬೇಕಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬೇಕಾದ ದಾಖಲೆಗಳು

ನೀವೇನಾದರೂ ಈ ಯೋಜನಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ದಾಖಲೆಗಳು ಇರಬೇಕು.

  • ಗುರುತಿನ ಚೀಟಿ (ಆಧಾರ್ ಕಾರ್ಡ್, ಮತದಾರರ ಕಾರ್ಡ್)
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ವಿಳಾಸದ ಪುರಾವೆ
  • ಭೂಮಿ ಅಥವಾ ಮನೆ ಸಂಬಂಧಪಟ್ಟ ದಾಖಲೆಗಳು
  • ಮಹಿಳಾ ಸದಸ್ಯರ ಗುರುತಿನ ವಿವರ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಎರಡು ವಿಧಗಳಿವೆ. ಮೊದ್ಲನೇದು ಆನ್ಲೈನ್ ಮೂಲಕ ಎರಡನೇದು ಆಫ್ಲೈನ್ ಮೂಲಕ ಅಂದರೆ ಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸುವುದು ನಿಮಗಾಗಿಯೇ ಈ ಕೆಳಗಡೆ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

ಆನ್‌ಲೈನ್ ಮೂಲಕ

  1. PMAY ಅಧಿಕೃತ ವೆಬ್‌ಸೈಟ್: https://pmaymis.gov.in
  2. “Citizen Assessment” ವಿಭಾಗದಡಿ ಅರ್ಹತೆಯ ಆಧಾರಿತ ಆಯ್ಕೆಮಾಡಿ.
  3. ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿ.
  4. ಫಾರ್ಮ್ ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
  5. ಅಪ್ಲಿಕೇಶನ್ ಅನ್ನು ಸಲ್ಲಿಸಿ ಹಾಗೂ ಕನ್ಫರ್ಮೇಶನ್ ಪಡೆದುಕೊಳ್ಳಿ ಗಮನಿಸಿ ಕನ್ಫರ್ಮೇಶನ್ ಆದ ನಂತರವೇ ನೀವು ಪ್ರತಿಯೊಂದು ಕೆಲಸ ಮುಗಿಸಿದ್ದೀರಿ ಎಂದರ್ಥ.

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತೆ ತಿಳಿಯಿರಿ:

  • ನಿಮ್ಮ ಗ್ರಾಮ ಪಂಚಾಯತಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ ಗಮನಿಸಿ ನೀವೇನಾದರೂ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಹೋಗಿ ಅಥವಾ ಒಂದು ವೇಳೆ ನೀವು ನಗರದಲ್ಲಿ ವಾಸಿಸುವಂತಿದ್ದರೆ ನಗರದ ಕಾರ್ಪೊರೇಷನ್ ಆಫೀಸ್ ಅಥವಾ ತಹಶೀಲ್ದಾರ್ ಆಫೀಸ್ ಗಳಿಗೆ ಭೇಟಿ ನೀಡಿ.
  • ಅರ್ಜಿ ಪಡೆದು, ವಿವರಗಳನ್ನು ಭರ್ತಿ ಮಾಡಿ.
  • ಸಂಬಂಧಿತ ದಾಖಲೆಗಳನ್ನು ಜೋಡಿಸಿ ಅರ್ಜಿ ಸಲ್ಲಿಸಬಹುದು.

ಯೋಜನೆಯ ಲಾಭಗಳೇನು.?

  1. ಆರ್ಥಿಕ ನೆರವು ದೊರೆಯುತ್ತದೆ: ಬಡ ಕುಟುಂಬಗಳಿಗೆ ನೇರ ಹಣ ಸಹಾಯ ಅಥವಾ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ರಿಯಾಯಿತಿ.
  2. ಮೂಲಭೂತ ಸೌಲಭ್ಯಗಳು ದೊರೆಯುತ್ತದೆ: ಮನೆಗೆ ಶೌಚಾಲಯ, ವಿದ್ಯುತ್, ನೀರು ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
  3. ಮಹಿಳಾ ಸಬಲೀಕರಣ: ಮನೆಯ ಮಾಲೀಕತ್ವ ಮಹಿಳೆಯ ಹೆಸರಿನಲ್ಲಿ ಇರಲು ಒತ್ತಾಯ.
  4. ಪರಿಸರ ಸ್ನೇಹಿ ಮನೆಗಳು: ಸ್ಥಳೀಯ ಬಂಡವಾಳ, ಶಕ್ತಿ ಮತ್ತು ಪರಿಸರಕ್ಕೆ ಹೊಂದಾಣಿಕೆಯ ವಿನ್ಯಾಸ.
  5. ಸ್ವಚ್ಛ ಭಾರತ ಅಭಿಯಾನದ ಭಾಗ: ಈ ಯೋಜನೆಯಿಂದ ಶೌಚಾಲಯ ನಿರ್ಮಾಣ ಪ್ರೋತ್ಸಾಹ ಕೂಡ ಲಭ್ಯ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಯಶಸ್ಸು ಮತ್ತು ಅದರ ಪ್ರಭಾವ:

ಪ್ರಧಾನಮಂತ್ರಿಯ ಆವಾಸ್ ಯೋಜನೆಯು ನಮ್ಮ ದೇಶದಲ್ಲಿ ಮನೆಯಲ್ಲ ಎಂದು ಹಸಿವಿನಿಂದ   ಬಳಲುತ್ತಿರುವ ಅಂತಹ ಹಲವಾರು ಕುಟುಂಬಗಳಿಗೆ ಇದೊಂದು ಆಶಾಕಿರಣವಾಗಿದೆ ಎಂದು ಹೇಳಬಹುದು. 2024 ಅಂತ್ಯದವರೆಗೆ ಕೊನೆಯವರೆಗೂ ದೇಶದಾದ್ಯಾಂತ 3 ಕೋಟಿಗಿಂತ ಹೆಚ್ಚು ಮನೆಗಳು ಈ ಯೋಜನೆಯಡಿ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿಯೂ ಹಲವಾರು ಗ್ರಾಮೀಣ ಕುಟುಂಬಗಳು ಇದರ ಲಾಭ ಪಡೆದುಕೊಂಡಿವೆ.

ಈ ಯೋಜನೆಯ ಮೂಲಕ, ನಿರ್ಗತಿಕರು ಮನೆತನ ಹೊಂದಿದ್ದಾರೆ ಅಂದರೆ ಮನೆ ಇಲ್ಲದವರು ಉಚಿತ ಮನೆ ಹೊಂದಿದ್ದಾರೆ ಎಂದರ್ಥ. ಪುಟ್ಟ ಮನೆಗಳಲ್ಲೂ ಒಂದು ಭದ್ರತೆ, ಗೌರವ ಮತ್ತು ಸುಸ್ಥಿರತೆ ಸಿಕ್ಕಿದೆ. ಮಹಿಳೆಯರ ಸಬಲೀಕರಣದ ಭಾಗವಾಗಿ ಮನೆ ಹೆಸರನ್ನು ಅವರ ಹೆಸರಿನಲ್ಲಿ ನೋಂದಾಯಿಸುವುದು ಮಹಿಳಾ ಸಬಲೀಕರಣಕ್ಕೆ ಹೊಸ ಅರ್ಥ ನೀಡಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸವಾಲುಗಳು

ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ತಿಳಿದೇ ಇರಬಹುದು ನೀವು ಮೊದಲ ಬಾರಿಗೆ ಈ ಯೋಜನೆಯ ಹೆಸರನ್ನು ಕೇಳಿದ್ದರೆ ಈ ಕೆಳಗಿನ ಪ್ರಶ್ನೆಗಳು ನಿಮಗಾಗಿ ಇರುತ್ತೆ.

  • ಅರ್ಜಿ ಪ್ರಕ್ರಿಯೆಯಲ್ಲಿ ಸ್ವಲ್ಪ ಜಟಿಲತೆ
  • ಸಾಕಷ್ಟು ಮಾಹಿತಿಯ ಕೊರತೆ
  • ಕೆಲವು ಪ್ರದೇಶಗಳಲ್ಲಿ ವಾಸ್ತವಿಕ ಅನುಷ್ಠಾನ ವಿಳಂಬ
  • ಭೂಮಿ ಲಭ್ಯತೆ ಸಮಸ್ಯೆ

ಆದರೂ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನದಲ್ಲಿದೆ.

ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಅವಾಸ್ ಯೋಜನೆಯ ಅನುಷ್ಠಾನ:

ಕರ್ನಾಟಕ ರಾಜ್ಯವು ಪ್ರಧಾನಮಂತ್ರಿಯ ಆವಾಸ್ ಯೋಜನೆ (PMAY-G ಮತ್ತು PMAY-U) ಜಾರಿಗೆ ಉತ್ತಮ ರೀತಿಯಲ್ಲಿ ಮುಂದಾಗಿದ್ದು, ಸಾವಿರಾರು ಕುಟುಂಬಗಳು ಇದರಿಂದ ಲಾಭ ಪಡೆದಿವೆ. ರಾಜ್ಯ ಸರ್ಕಾರವು ಕೇಂದ್ರ ಯೋಜನೆಗಳಿಗೆ ಪೂರಕವಾಗಿ ಕೆಲವೊಂದು ತಮ್ಮದೇ ಆದ ಬದಲಾವಣೆಗಳನ್ನು ಅಳವಡಿಸಿಕೊಂಡು ಯೋಜನೆಗೆ ಮುನ್ನಡೆ ಹಾಡಿದೆ.

ಪ್ರಮುಖ ಅಂಶಗಳು:

  • ಗ್ರಾಮೀಣ ಪ್ರದೇಶದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮನೆಗಳು ಈಗಾಗಲೇ ನಿರ್ಮಾಣದ ಹಂತ ತಲುಪಿವೆ.
  • ನಗರ ಸ್ಥಳೀಯ ಸಂಸ್ಥೆಗಳ ಮೂಲಕ, PMAY-U ಯೋಜನೆಯಡಿ ಬಿಡಿಎ ಮತ್ತು ಕಾರ್ಪೋರೇಶನ್‌ಗಳು ಮನೆ ನಿರ್ಮಾಣ ಕಾರ್ಯ ನಿರ್ವಹಿಸುತ್ತಿವೆ.
  • ಸರ್ಕಾರವು ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ, ಇದರ ಫಲವಾಗಿ ಮಧ್ಯವರ್ತಿ ದಂಧೆ ಅಥವಾ ಹಗರಣಗಳ ಸಂಭವ ಕಡಿಮೆಯಾಗಿರುತ್ತದೆ. ಅಂದರೆ ನೋಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸ್ಯಾಂಕ್ಷನ್ ಆದ ನಂತರ ಹಲವಾರು ಮಧ್ಯವರ್ತಿಗಳು ಬರುತ್ತಾರೆ. ಇದರಲ್ಲಿ ಸರ್ಕಾರಿಗಳೇ ಮೇಲು ಇಂಥವರು ಹಣ ದೋಚಲು ಮುಂದಾಗುತ್ತಾರೆ. ಚಿಕ್ಕ ಹಣದಲ್ಲಿ ಸ್ವಲ್ಪ ಎಷ್ಟು ನುಂಗಬೇಕು ಈ ರೀತಿ ಮಾಡಲಾಗಿದೆ.
  • ಹಲವು ಜಿಲ್ಲೆಗಳ ಗ್ರಾಮ ಪಂಚಾಯತಿಗಳು ಈ ಯೋಜನೆಗೆ ಶಕ್ತಿ ಕೇಂದ್ರಗಳಾಗಿವೆ ನಿನಗೆಲ್ಲ ತಿಳಿಸುವುದಾದರೆ ಕಲಬುರಗಿ, ಬಳ್ಳಾರಿ, ಬೀದರ್, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ.

PMAY – ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS):

ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಒಂದು ಪ್ರಮುಖ ಅಂಶವೆಂದರೆ Credit Linked Subsidy Scheme (CLSS). ಇದು ಬಡ ಅಥವಾ ಮಧ್ಯಮ ವರ್ಗದ ಕುಟುಂಬಗಳು ಬ್ಯಾಂಕ್ ಮೂಲಕ ಗೃಹ ಸಾಲ ಪಡೆದು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಡ್ಡಿದರದಲ್ಲಿ ಸಬ್ಸಿಡಿ ಪಡೆಯುವ ಅವಕಾಶ ನೀಡುತ್ತದೆ.

CLSS ವೈಶಿಷ್ಟ್ಯಗಳು:

  • EWS/LIG ವರ್ಗ: ಗೃಹ ಸಾಲದ ಮೇಲೆ ಶೇ.6.5ರಷ್ಟು ಬಡ್ಡಿದರ ಸಬ್ಸಿಡಿ
  • MIG-I ವರ್ಗ: ಶೇ.4 ಬಡ್ಡಿದರ ರಿಯಾಯಿತಿ (₹9 ಲಕ್ಷವರೆಗೆ ಸಾಲ)
  • MIG-II ವರ್ಗ: ಶೇ.3 ಬಡ್ಡಿದರ ರಿಯಾಯಿತಿ (₹12 ಲಕ್ಷವರೆಗೆ ಸಾಲ)
  • ಗರಿಷ್ಠ ಸಬ್ಸಿಡಿ ₹2.67 ಲಕ್ಷವರೆಗೆ ಹಣ ದೊರೆಯುತ್ತದೆ.
  • ಈ ಸಬ್ಸಿಡಿ ನೇರವಾಗಿ ಗೃಹ ಸಾಲದ ಮೊತ್ತದಿಂದ ಕಡಿತಗೊಳ್ಳುತ್ತದೆ

ಕೇಂದ್ರ ಸರ್ಕಾರದ ಇತರ ಯೋಜನೆಗಳ ಜೋಡಣೆ ವಿವರ:

ಪ್ರಧಾನಮಂತ್ರಿಯ ಆವಾಸ್ ಯೋಜನೆ ಅನೇಕರಿಗೆ ವಸತಿ ನೀಡುವ ಜೊತೆಗೆ, ಇತರ ಹಲವಾರು ಯೋಜನೆಗಳೊಂದಿಗೆ ಜೋಡಿಸಲಾಗಿದೆ. ಈ ಜೋಡಣೆ ಫಲಾನುಭವಿಗಳಿಗೆ ಪೂರ್ಣ ಗೃಹ ಮೂಲಸೌಕರ್ಯವನ್ನು ಒದಗಿಸುವತ್ತ ಒತ್ತು ನೀಡುತ್ತದೆ ಎಂದು ಹೇಳಬಹುದು.

ಇಂತಹ ಯೋಜನೆಗಳು:

  • ಸ್ವಚ್ಛ ಭಾರತ ಮಿಷನ್ (ಶೌಚಾಲಯ)
  • ಸೌಭಾಗ್ಯ ಯೋಜನೆ (ವಿದ್ಯುತ್ ಸಂಪರ್ಕ)
  • ಉಜ್ವಲಾ ಯೋಜನೆ (ಅಡುಗೆ ಅನಿಲ)

ಈ ಯೋಜನೆಗಳ ಸಹಾಯದಿಂದ ಮನೆ ನಿರ್ಮಾಣ ಮಾತ್ರವಲ್ಲದೇ ಮಾನವೀಯ ರೀತಿಯ ಬದುಕಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಸೌಕರ್ಯಗಳು ದೊರೆಯುತ್ತದೆ ಎಂದು ಹೇಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ವಿಶೇಷ ಗುರಿ ಸಮೂಹಗಳ ಮೇಲೆ ಗಮನ:

ಈ ಯೋಜನೆ ಸಾಮಾಜಿಕವಾಗಿ ಬಲಹೀನ ವರ್ಗಗಳನ್ನೂ ಗಮನದಲ್ಲಿಟ್ಟುಕೊಂಡೇ ಇಂತಹ ಯೋಜನೆಗಳನ್ನು ಜಾರಿಗೆ ಮಾಡಲಾಗಿದೆ ಕೇಂದ್ರ ಸರ್ಕಾರ.:

  • ಶೋಷಿತ ವರ್ಗಗಳು (SC/ST)
  • ಅಲ್ಪಸಂಖ್ಯಾತ ಸಮುದಾಯಗಳು
  • ಮಹಿಳಾ ಮುಖ್ಯಸ್ಥರು ಹೊಂದಿರುವ ಕುಟುಂಬಗಳು
  • ಅಂಗವಿಕಲರು ಮತ್ತು ವೃದ್ಧರು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಶೋಗಾಥೆಗಳು:

ಈ ಯೋಜನೆಯಿಂದಾಗಿ ಹಲವಾರು ಕುಟುಂಬಗಳ ಆವಾಸ ಯೋಜನೆಯು ಬಹಳ ಬದಲಾವಣೆಯಾಗಿದೆ ಎಂದು ಹೇಳಬಹುದು ಉದಾಹರಣೆಗಾಗಿ ನಿಮಗಾಗಿ ಈ ಕೆಳಗಡೆ ತಿಳಿಸಲಾಗಿದೆ ಗಮನಿಸಿ ಈ ಕೆಳಗಡೆ ಒದಗಿಸಿರುವ ಮಾಹಿತಿ ನೈಜವಾಗಿರುತ್ತೆ ಅಂದರೆ ಇದು ಸತ್ಯವಾಗಿ ನಡೆದಿರುವಂತಹ ಘಟನೆ ಯಾಗಿರುತ್ತೆ. 

  • ರಾಯಚೂರಿನ ಬಡಕುಟುಂಬ: ಒಂದು ಕೊಳವೆದಾರಿ ಮನೆಯಲ್ಲಿದ್ದ ಕುಟುಂಬಕ್ಕೆ ಈಗ ನಾಲ್ಕು ಕೋಣೆಯ ಪಕ್ಕಾ ಮನೆ ಲಭಿಸಿದ್ದು, ಮಕ್ಕಳಿಗೆ ಓದಲು ವ್ಯವಸ್ಥಿತ ಜಾಗ, ಮಹಿಳೆಗೆ ಅಡುಗೆ ಕೋಣೆ ದೊರೆತಿದೆ.
  • ಮೈಸೂರು ಜಿಲ್ಲೆಯ ಅಂಗವಿಕಲ ಫಲಾನುಭವಿಗೆ ಸರ್ಕಾರಿ ಸಹಾಯದಿಂದ ಪ್ರತ್ಯೇಕ ಮನೆ ನಿರ್ಮಿಸಲಾಗಿದೆ, ಜೊತೆಗೆ ಶೌಚಾಲಯ, ನಿಶ್ಚಲ ಹತ್ತಿ ಬೀಳದ ಪಥವೂ ನೀಡಲಾಗಿದೆ.
  • ಬೆಳಗಾವಿಯ ಹಳ್ಳಿ ಮಹಿಳೆ – ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಮನೆ ದಾಖಲಾಗಿದ್ದು, ಇದು ಆಕೆಗೆ ಗೌರವ ಮತ್ತು ಆತ್ಮವಿಶ್ವಾಸ ನೀಡಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಭವಿಷ್ಯದ ದೃಷ್ಟಿಕೋನ ಹೇಗಿರುತ್ತೆ ತಿಳಿಯಿರಿ:

2025ರ ನಂತರವೂ ಈ ಯೋಜನೆಯು ಮುಂದುವರಿಯುವ ನಿರೀಕ್ಷೆ ಇದೆ. ಈಗಾಗಲೇ 2024-25 ಸಾಲಿನಲ್ಲಿ ಹೆಚ್ಚುವರಿ ಬಜೆಟ್ ಮಂಜೂರಾಗಿದ್ದು, ಸ್ವಯಂ ಉದ್ಯೋಗ,  ನಗರ ಅಭಿವೃದ್ಧಿ, ಮತ್ತು ಪುನರ್ ವಸತಿ ಯೋಜನೆಗಳಿಗೆ ಸೇರ್ಪಡೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತದಲ್ಲಿ ಮನೆ ಎಂಬ ಕನಸು ಸಾಮಾನ್ಯ ಮನುಷ್ಯನಿಗೆ ಸ್ಪರ್ಶಿಸುವಂತಾಗಿದೆ. ಇದು ಕೇವಲ ಅಭಿವೃದ್ದಿಯ ಅಂಶವಲ್ಲ; ಇದು ಮಾನವೀಯ ಹಕ್ಕು ಮತ್ತು ಗೌರವದ ಪ್ರತಿಕವಾಗಿದೆ ಎಂದು ಹೇಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಸ್ತಾಪ ಮತ್ತು ಸಲಹೆಗಳು:

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಪ್ರಸ್ತಾಪ ಹಾಗೂ ಸಲಹೆಗಳು ಈ ಕೆಳಗಿನಂತಿವೆ ಗಮನಿಸಿ ಈ ಕೆಳಗಿನವುಗಳನ್ನು ನೀವು ಗಮನಿಸಿದರೆ ಸಾಕು ನಿಮಗೆ ಮನೆ ಸಿಗುವಂತಹ ಚಾನ್ಸ್  ಇರುತ್ತೆ.

  • ಅರ್ಜಿದಾರರು ತಮ್ಮ ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಿಕೊಳ್ಳಬೇಕು.
  • ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಸರಿಯಾದ ವಿವರಗಳನ್ನು ನೀಡಬೇಕು, ಒಂದು ವೇಳೆ ತಪ್ಪಾಗಿದ್ದರೆ  ಅರ್ಜಿ ತಿರಸ್ಕೃತವಾಗಬಹುದು.
  • ಗ್ರಾಮ ಪಂಚಾಯತಿ ಅಥವಾ ನಗರಸ್ಥಳೀಯ ಸಂಸ್ಥೆಯ ಸಹಾಯವನ್ನು ಪಡೆಯುವುದು ಉತ್ತಮ.
  • ಸಮಯಕ್ಕನುಸಾರ ನೋಟಿಫಿಕೇಶನ್‌ಗಳನ್ನು ಮತ್ತು ಪ್ರಗತಿ ವರದಿಗಳನ್ನು ಪರಿಶೀಲಿಸುತ್ತಿರಿ.
  • ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಅಧಿಕೃತ ವೆಬ್‌ಸೈಟ್ ಅಥವಾ ನಿಕಟದ ಅಧಿಕಾರಿಗಳಿಂದಲೇ ಪಡೆಯಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೊನೆ ಮಾತು:

ನೋಡಿ, ಇಲ್ಲಿ ಪ್ರತಿಯೊಬ್ಬರು ಗಮನಿಸಿ ಈ ಒಂದು ಪ್ರಥಮ ಮಂತ್ರಿ ಆವಾಸ್ ಯೋಜನೆ, ಬಡವರಿಗಾಗಿಯೇ ತಮ್ಮ ಕನಸುಗಳನ್ನು ನನಸು ಮಾಡಲು ಬಂದಂತ ಒಂದು ಯೋಜನೆಯಾಗಿದೆ ಇದು ಸರ್ಕಾರದ ಪ್ರಗತಿಯಲ್ಲಿರುವ ಒಂದು ಯೋಜನೆ. ಕನಸುಗಳನ್ನು ಸಾಕಾರಗೊಳಿಸಲು ಅತ್ಯಂತ ಶ್ರೇಷ್ಠ ಯತ್ನವಾಗಿದೆ. ಇದು ಕೇವಲ ವಾಸತಿಗೆ ಸಂಬಂಧಿಸಿದ ಯೋಜನೆಯಲ್ಲ; ಇದು ಬದುಕಿಗೆ ಭದ್ರತೆ ನೀಡುವ, ಮಹಿಳೆಯರ ಶಕ್ತೀಕರಣಕ್ಕೆ ದಾರಿ ಹಾಕುವ, ಮತ್ತು ಸಮಾನತೆಗೆ ನೆರವಾಗುವ ದಾರಿ.

ಒಂದು ಪಕ್ಕಾ ಮನೆ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಾಯಿಸಬಹುದು – ಇದು ಆ ಕುಟುಂಬದ ಮಕ್ಕಳ ಭವಿಷ್ಯವನ್ನು ರೂಪಿಸಬಹುದು. ಇಂತಹ ಯೋಜನೆಗಳನ್ನು ಹೆಚ್ಚು ಜನರು ಉಪಯೋಗಿಸಿಕೊಳ್ಳಬೇಕು.

ಸಂಬಂಧಿತ ಅಧಿಕೃತ ವೆಬ್‌ಸೈಟ್‌ಗಳು:

ಪ್ರಧಾನ ಮಂತ್ರಿ ಆವಾಸ್ ಯೋಜನೆ – ಪ್ರಶ್ನೆೋತ್ತರ (FAQ)

1. ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಭಾರತ ಸರ್ಕಾರದ ಒಂದು ಮಹತ್ವದ ಗೃಹ ಯೋಜನೆಯಾಗಿದ್ದು, 2025 8ರ ಒಳಗೆ ಎಲ್ಲರೂ ಮನೆಯ ಮಾಲೀಕರು ಆಗುವಂತೆಯಾದ ಗುರಿಯನ್ನು ಹೊಂದಿದೆ.

2. ಯೋಜನೆಯ ಉದ್ದೇಶವೇನು?
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಚಾಲತ್ತುಗಳೊಂದಿಗೆ ಪಕ್ಕಾ ಮನೆ ನಿರ್ಮಿಸುವ ಒಂದು ಉದ್ದೇಶ.

3. ಯೋಜನೆಯ ಅಡಿಯಲ್ಲಿ ಸಿಗುವ ಸಹಾಯಧನ ಎಷ್ಟು?
ಒಂದು ವೇಳೆ ನೀವೇನಾದರೂ ಗ್ರಾಮೀಣ ಪ್ರದೇಶದ ವಾಗಿದ್ದರೆ ಸುಮಾರು ₹1.20 ಲಕ್ಷದಿಂದ ₹1.30 ಲಕ್ಷವರೆಗೆ, ನಗರ ಪ್ರದೇಶದಲ್ಲಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರಕ್ಕೆ ಸಬ್ಸಿಡಿಯ ರೂಪದಲ್ಲಿ ನೆರವು ಸಿಗುತ್ತದೆ.

4. ಅರ್ಜಿ ಸಲ್ಲಿಸಲು ಯಾರು ಅರ್ಹರು?
ಬಡ ಕುಟುಂಬಗಳು, ವಿಶೇಷವಾಗಿ ಮಹಿಳಾ ನಾಮದಲ್ಲಿ ಮನೆ ನಿರ್ಮಿಸುವವರು, ಅನುಸರಣೆ ಪ್ರಕಾರ ಪ್ರಾಧಾನ್ಯ ಪಡೆದ ಕುಟುಂಬಗಳು ಅರ್ಹರಾಗುತ್ತಾರೆ.

5. ಹೇಗೆ ಅರ್ಜಿ ಅರ್ಜಿ ಸಲ್ಲಿಸಬಹುದು ಈ ಯೋಜನೆಗೆ?
ಅಧಿಕೃತ ವೆಬ್‌ಸೈಟ್ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಗಳು ಅಥವಾ ನಗರಸಭೆ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!